ಪಟ ಪಟ ಗಾಳಿಪಟ

Author : ಈರಣ್ಣ ಬೆಂಗಾಲಿ

Pages 80

₹ 99.00
Year of Publication: 2020
Published by: ಕೃಷ್ಣಾರುಣ ಪ್ರಕಾಶನ

Synopsys

ವ್ಯಂಗ್ಯಚಿತ್ರಕಾರ, ಲೇಖಕ ಈರಣ್ಣ ಬೆಂಗಾಲಿ ಅವರ ಮಕ್ಕಳ ಕವಿತೆಗಳ ಸಂಕಲನ ಕೃತಿ ʻಪಟ ಪಟ ಗಾಳಿಪಟʼ. ಪ್ರಸ್ತುತ ಪುಸ್ತಕ ಐವತ್ತು ಕವನಗಳನ್ನು ಹೊಂದಿದೆ. ಕವಿತೆಗಳ ಜೊತೆಗೆ ಮಕ್ಕಳ ಗಮನ ಹಿಡಿದಿಟ್ಟುಕೊಳ್ಳಲು ಆಕರ್ಷಕವಾದ ರೇಖಾಚಿತ್ರಗಳನ್ನು ವ್ಯಂಗ್ಯಚಿತ್ರ ಕಲಾವಿದ ಅರುಣ್ ಹಾಗೂ ಈರಣ್ಣ ಅವರು ರಚಿಸಿದ್ದಾರೆ. ಈಗಾಗಲೇ ಹೈಕು, ಗಜಲ್‌, ಹನಿಗವನ, ಜೀವನಚರಿತ್ರೆ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಲೇಖಕರು ಈ ಕೃತಿಯ ಮೂಲಕ ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಮನರಂಜನೆಯ ಮೂಲಕ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

About the Author

ಈರಣ್ಣ ಬೆಂಗಾಲಿ

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...

READ MORE

Related Books