ಹಿರಿಯ ಲೇಖಕ ಕೆ.ವಿ. ತಿರುಮಲೇಶ್ ಅವರ ಮಕ್ಕಳ ಕವನ ಸಂಕಲನ ‘ನಂಬಿ ಕೆಟ್ಟವರಿಲ್ಲ ಪುಟ್ಟನ!’ ಈ ಕೃತಿಗೆ ಆನಂದ ಪಾಟೀಲರ ಮುನ್ನುಡಿ ಬರಹವಿದೆ. ಕೃತಿಯನ್ನು ಪರಿಚಯಿಸುತ್ತಾ ನರ್ಸರಿ ರೈಮ್ ಮಾದರಿಯವು ಕನ್ನಡದಲ್ಲಿ ಪ್ರಭಾವಕಾರಿಯಾಗಿ ಅಷ್ಟಾಗಿ ಬಂದಿಲ್ಲವೆಂದೇ ಹೇಳಬಹುದು. ಇಂಗ್ಲಿಷು ಕಲಿಕೆಯ ಭರಾಟೆಯಲ್ಲಿ ನಮ್ಮ ಪುಟಾಣಿಗಳು ಇಂಗ್ಲಿಷಿನ ರೈಮ್ ಗಳನ್ನು ಹೇಳಿದರೆ ಸೈ ಎನ್ನುವಂತಾಗಿ ಕನ್ನಡದಲ್ಲಿ ರಚನೆಯಾದರೂ ಅವನ್ನು ನೋಡುವವರಾರು ಎನ್ನುವಂಥ ಸ್ಥಿತಿಯಾಗಿದೆ. ತಿರುಮಲೇಶರು, ಪುಟಾಣಿಗಳಿಗಾಗುವ, ಸುಲಭವಾಗಿ ಅಂದುಕೊಳ್ಳಬಹುದಾದ, ಹಾಗೆಯೇ ಕೇಳುತ್ತ ಕೇಳುತ್ತ ಅನುಭವಿಸುವ, ಆನಂದಿಸುವ ಅನೇಕ ಪದ್ಯಗಳನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2023 Book Brahma Private Limited.