ಚಿಣ್ಣರ ಕನಸಿನ ಬಣ್ಣದ ಲೋಕ

Author : ಶೋಭಾ ಹರಿಪ್ರಸಾದ್‌

Pages 120

₹ 120.00




Year of Publication: 2019
Published by: ಹೆಚ್‌ ಎಸ್‌ ಆರ್‌ ಪ್ರಕಾಶನ
Address: ಅನ್ನಪೂಣೇಶ್ವರಿ ನಿಲಯ ,1ನೇ ಮುಖ್ಯ ರಸ್ತೆ , ಭೈರವೇಶ್ವರ ನಗರ ಬೆಂಗಳೂರು 560058
Phone: 7892793054

Synopsys

ಚಿಣ್ಣರ ಕನಸಿನ ಬಣ್ಣದ ಲೋಕ ಶೋಭಾ ಹರಿಪ್ರಸಾದ್‌ ಅವರ ಕವನಸಂಕಲನವಾಗಿದೆ. ಇತ್ತೀಚೆಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕವನಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಬೆಳಕು ಕಾಣುತ್ತಿದ್ದು, ಕನ್ನಡಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿವೆ. ನವ್ಯ, ನವೀನ, ಬಂಡಾಯ ಹಾಗೂ ಜಾನಪದ ಶೈಲಿಯ ಆ ಕವನಗಳು ಓದುಗರ ಮನಕ್ಕೆ ಸುಲಭದಲ್ಲಿ ನಾಟಬಹುದು ಎಂದೋ, ಗೇಯತೆಯುಳ್ಳದ್ದು ಎಂದೋ ಹಾಡುವುದಕ್ಕೆ ಸುಲಭವೆಂದೋ ರಚಿತಗೊಳ್ಳುತ್ತಿವೆ. ಆದರೆ, ಮಕ್ಕಳಿಗಾಗಿಯೇ ರಚಿತವಾಗುವ ಕವನಗಳು ಬಹಳ ಕಡಿಮೆಯೆಂದೇ ಹೇಳಬಹುದು. ಈ ಕೊರತೆಯನ್ನು ಶೋಭಾ ಹರಿಪ್ರಸಾದ್‌ರವರ 'ಚಿಣ್ಣರ ಕನಸಿನ ಬಣ್ಣದ ಲೋಕ' ಕವನಸಂಕಲನವು ನೀಗಿಸುತ್ತಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಅದರಲ್ಲೂ ಭೋಗಷಟ್ನದಿ, ಶರಷಟ್ಟದಿ, ಕುಸುಮ ಷಟ್ಟದಿ ಮುಂತಾದ ಛಂದೋಬದ್ಧತೆಯುಳ್ಳ ಈ ಕವನಗಳ ರಚನೆಯು ಸಾರಸ್ವತ ಲೋಕಕ್ಕೊಂದು ಹೆಮ್ಮೆಯ ಕನ್ನಡ ಕಾಣಿಕೆಯಾಗಿರುತ್ತದೆ. ಪ್ರಾಸಕ್ಕೂ ಸುಲಭದಲ್ಲಿ ಸಿಕ್ಕುವ ಹಾಗೂ ಮಕ್ಕಳ ಕಲ್ಪನೆಯನ್ನು ಕೆದರಿಸುವ ಈ ಸಂಕಲನದ ಕವನಗಳು ಎಲ್ಲ ಮಕ್ಕಳಿಗೂ ಪ್ರಿಯವೆನಿಸಬಹುದು. ಈ ಕವನ ಸಂಕಲನದ ಪುಟಗಳನ್ನು ತೆರೆಯುತ್ತಿದ್ದಂತೆಯೇ 'ಬಣ್ಣದ ಹೂವುಗಳು' ಕವನದಲ್ಲಿ ಹಲವಾರು ಕುಸುಮಗಳನ್ನು ಶರಷಟ್ಟದಿ ಛಂದಸ್ಸಿನಲ್ಲಿ ವರ್ಣಿಸಿರುವುದನ್ನು ಕಾಣಬಹುದು ಎಂದು ಗೀರಿಶ್‌ ಮೂರ್ನಾಡು ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶೋಭಾ ಹರಿಪ್ರಸಾದ್‌

ಶೋಭಾ ಹರಿಪ್ರಸಾದ್‌ ಮೂಲತಃ ಸಾಲಿಕೇರಿಯವರು. ತಾಯಿ ಲಲಿತಾ ಶೆಟ್ಟಿಗಾರ್ ತಂದೆ ನಾರಾಯಣ ಶೆಟ್ಟಿಗಾರ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ  ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ  ಪೂರ್ಣಗೊಳಿಸಿ  ಹೈಸ್ಕೂಲ್ ಮತ್ತು ಬಿ. ಎ ಪದವಿಯನ್ನು ಎಸ್ ಎಮ್ ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರ್ಣ ಗೊಳಿಸಿದರು.  ಮಂಗಳೂರಿನ‌ ಸರಕಾರಿ ಕಾಲೇಜಿನಲ್ಲಿ  ಬಿ.‌ಎಡ್. ಅನ್ನು ಪೂರ್ಣಗೊಳಿಸಿದ ಅವರು  ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ವರ್ಷದಿಂದ ತೊಡಗಿಸಿ ಕೊಂಡಿದ್ದಾರೆ. ಇವರು ಮೊದಲು ಬರೆದದ್ದು ಬೆರಳೆಣಿಕೆಯಷ್ಟು ಹನಿಗವನ ಮತ್ತು ಕತೆ. ರಾಜ್ಯ ಕವಿ ವೃಕ್ಷ  ಪ್ರಶಸ್ತಿ, ವ್ಯಾಕರಣ ಚೂಡಾಮಣಿ ಪ್ರಶಸ್ತಿ ಅವರಿಗೆ ದೊರೆತ ಪ್ರಶಸ್ತಿಗಳಾಗಿವೆ.  ಕೃತಿಗಳು  : ಚಿಣ್ಣರ ಕನಸಿನ ಬಣ್ಣದ ಲೋಕ ,ಬೇವು ...

READ MORE

Related Books