ಪಾಪು ಪದ್ಯಗಳು ಮತ್ತು ಒಬಿರಾಯನ ಕಥೆಗಳು ಶ್ರೀನಿವಾಸ ಉಡುಪ ಅವರ ಕಥೆಯಾಗಿದೆ. ಪಾಪು ಪದ್ಯಗಳು ನಮ್ಮ ಪ್ರಸಿದ್ಧ ಮಕ್ಕಳ ಕವಿ ಶ್ರೀನಿವಾಸ ಉಡುಪರ ಮರಣೋತ್ತರ ಪ್ರಕಟಣೆ. ಉಡುಪರು ಮಕ್ಕಳ ಮನೋಲೋಕವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ, ಮಕ್ಕಳ ಅಗತ್ಯಗಳನ್ನು ಸೊಗಸಾಗಿ ಪೂರೈಸಬಲ್ಲ ಸಮರ್ಥ ಮಕ್ಕಳ ಸಾಹಿತಿ, ಇವರ ಪದ್ಯಗಳಲ್ಲಿ ಕಾಣುವ ಕಲ್ಪಕತೆ, ಸಹಜ ಪ್ರಾಸ, ನವಿರು ತಮಾಷೆ, ಭಾಷಾ ಸೂಕ್ಷ್ಮತೆ ಅಪರೂಪದವು. ಕುಂಭಕರ್ಣನ ನಿದ್ದೆಯಂಥ ಕ್ಲಾಸಿಕ್ ಮಕ್ಕಳ ಕವಿತೆಯನ್ನು ಕನ್ನಡಕ್ಕೆ ಕೊಟ್ಟವರು ಇವರು. ಕವಿತೆಗಳೊಂದಿಗೆ ಓಬಿರಾಯನ ಕಥೆ ಎಂಬ ಉಡುಪರ ಅಪ್ರಕಟಿತ ನಾಟಕ ಈ ಸಂಗ್ರಹದ ಒಂದು ಬೋನಸ್ ಕೊಡುಗೆ ಆಗಿದೆ ಎಂದು ಡಾ. ಎಚ್. ಎಸ್ ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2023 Book Brahma Private Limited.