ಮಂಗಟ್ಟೆಯ ತೋಟದಲ್ಲಿ -ಮನೋಹರ ಜನ್ನು ಅವರ ಕವಿತೆಗಳ ಸಂಕಲನ. ವಿಶೇಷವಾಗಿ ಪ್ರಕೃತಿ, ಪರಿಸರ ಪ್ರೀತಿ, ನೀತಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುವ ಒಟ್ಟು 69 ಮಕ್ಕಳ ಕವಿತೆಗಳಿವೆ. ಮಕ್ಕಳ ಹನಿಗಳು, ಚುಟುಕುಗಳು ಸರಳ ಸುಮನದ ಭಾಷೆಯಲ್ಲಿ ಪರಿಸರ ಮತ್ತು ಜೀವ ಜಂತುಗಳ ಪರಿಚಯ ಮತ್ತು ಅವುಗಳ ಜೀವನ ಕುರಿತು ಮನೋಜ್ಞ ಕವನಗಳು ಗಮನ ಸೆಳೆಯುತ್ತವೆ. ಹಸಿರು ನೀರು ಮಾನವನ ಬದುಕಿಗೆ ಅದರಿಂದಾಗುವ ಲಾಭ, ಅರಣ್ಯ ಉಳಿಸಬೇಕಾದ ಅನಿವಾರ್ಯತೆಯನ್ನು ಮಕ್ಕಳಿಗೆ ಸಲಹೆ ರೂಪದಲ್ಲಿ ಉಪದೇಶದ ರೂಪದಲ್ಲಿ ನೀತಿ ಬೋಧಕವಾಗಿ ಈ ಕವಿತೆಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತುತ್ತವೆ.
©2025 Book Brahma Private Limited.