ಲೇಖಕ ಯಲ್ಲಪ್ಪ ಎಂ.ಮರ್ಚೇಡ್ ಅವರ ಮಕ್ಕಳಾ ಕವನ ಸಂಕಲನ ’ಬಣ್ಣದ ಗುಬ್ಬಿ’.ಇರುವೆ, ಅನಾಥ ಹಕ್ಕಿಯ ಕೂಗು, ಹಂಚಿ ತಿನ್ನುವ ಕಾಗೆ, ನವಿಲೇ..... ನವಿಲೇ...., ಸೈಕಲ್,ಬಣ್ಣದ ಗುಬ್ಬಿ , ಕಾಡು ಸುತ್ತಿ ಬತ್ತೀನಿ, ಕಾಡು ಕಾಡು ಎಂದರೆ...., ಪಟ್ಟಣ - ಹಳ್ಳಿ, ಸೇರಿದಂತೆ ಒಟ್ಟು 23 ಕವಿತೆಗಳಿವೆ.
ಈ ಕೃತಿಗೆ ಬೆನ್ನುಡಿ ಬರೆದ ಹ.ಸ,ಬ್ಯಾಕೋಡ, ’ ಸಂಕಲನದಲ್ಲಿ ಹೆಚ್ಚಾಗಿ ಪರಿಸರದ ಭಾಗವಾದ ಕಾಗೆ, ಗುಬ್ಬಿ, ನವಿಲು ಸೇರಿದಂತೆ ಒಂದಿಷ್ಟು ಹಕ್ಕಿ ಪ್ರಾಣಿಗಳ ಕುರಿತಾದ ಪದ್ಯಗಳು ಗಮನ ಸೆಳೆಯುತ್ತವೆ. ಅವುಗಳ ಜೀವನಶೈಲಿಯನ್ನು ಮಕ್ಕಳಿಗೆ ಪರಿಚಯಿಸುವಂತಹ ಸಂಗತಿಗಳುಳ್ಳ ಪದ್ಯಗಳನ್ನು ಯಲ್ಲಪ್ಪನವರು ರಚಿಸಿದ್ದಾರೆ. ಇಂದಿನ ಮಕ್ಕಳಿಗೆ ಇಂತಹ ಪದ್ಯಗಳು ಅತ್ಯಗತ್ಯವೆನಿಸುತ್ತವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪ್ರಶಂಸಿಸಿದ್ದಾರೆ.
©2023 Book Brahma Private Limited.