ಸಂಕೀರ್ಣ ವಚನಸಂಪುಟ ಭಾಗ-2

Author : ಎಸ್. ವಿದ್ಯಾಶಂಕರ

Pages 448

₹ 850.00




Year of Publication: 2001
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಪಂಪ ಮಹಾಕವಿ ರೋಡ್ ಚಾಮರಾಜಪೇಟೆ ಬೆಂಗಳೂರು

Synopsys

‘ಸಂಕೀರ್ಣ ವಚನಸಂಪುಟ ಭಾಗ-2’ ಕೃತಿಯು ಎಸ್. ವಿದ್ಯಾಶಂಕರ ಅವರ ಸಮಗ್ರ ವಚನ ಸಂಪುಟವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ಎಂ. ಕೃಷ್ಣ ಅವರು ವಚನವೆಂಬುದು ಸಾಹಿತ್ಯಕ್ಕೆ ಚಳುವಳಿಯಾಗಿದೆ. ಕನ್ನಡ ನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಙ್ಞಯ ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ. ಅನೇಕ ಜನ ವಿದ್ವಾಂಸರು, ಅನೇಕ ಸಂಸ್ಥೆಗಳು, ಇಂತಹ ಸಾಹಿತ್ಯವನ್ನು ಬೆಳಕಿಗೆ ತರಲು ಶ್ರಮಿಸಿದ್ದಾರೆ. ಈ ಸಾಹಿತ್ಯ ದ್ವಿತೀಯ ಆವೃತ್ತಿಯನ್ನು ವಚನ ಪರಿಭಾಷಾಕೋಶವೂ ಒಳಗೊಂಡಂತೆ 15 ಸಂಪುಟಗಳನ್ನು ಮಹತ್ವದ ವಚನ ಗ್ರಂಥವಾಗಿದೆ’ ಎಂದಿದ್ದಾರೆ.

ಇಲ್ಲಿ ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣವನ್ನು ಕಾರ್ಯಗತಗೊಳಿಸಲು ಹೋರಾಡಿ ಮಡಿದಂತಹ ಹುತಾತ್ಮರ ಸಾಹಿತ್ಯವಿದೆ. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ ಸತ್ತೆಗಳ ವಿರುದ್ಧ, ಕರ್ನಾಟಕದ ಎಲ್ಲಾ ಜನರು ನಡೆಸಿದ ಹೋರಾಟದ ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರ ಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.

About the Author

ಎಸ್. ವಿದ್ಯಾಶಂಕರ

ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ...

READ MORE

Related Books