ವಚನಗಳಲ್ಲಿ ತತ್ವಮೀಮಾಂಸೆ

Author : ಎನ್.ಜಿ. ಮಹಾದೇವಪ್ಪ

Pages 264

₹ 150.00




Year of Publication: 2009
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿಮಠ, ಶಿವಬಸವನಗರ, ಬೆಳಗಾವಿ

Synopsys

‘ವಚನಗಳಲ್ಲಿ ತತ್ವ ಮೀಮಾಂಸೆ’ ಕೃತಿಯು ಎನ್.ಜಿ. ಮಹಾದೇವಪ್ಪ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ನಲ್ನುಡಿ, ಪ್ರಕಾಶಕರ ಮಾತು, ಲೇಖಕನ ಮಾತು, ಎರಡನೆಯ ಮುದ್ರಣಕ್ಕೆ ಎರಡು ಮಾತು ಹಾಗೂ 6 ಅಧ್ಯಾಯಗಳಾದ ಪ್ರಸ್ತಾವನೆ, ದೈವದ ಪರಿಕಲ್ಪನೆ, ಶಕ್ತಿ ಮತ್ತು ಶಿವ- ಶಕ್ತಿ ಸಂಬಂಧ, ವಿಶ್ವಶಾಸ್ತ್ರ, ಆತ್ಮದ ಪರಿಕಲ್ಪನೆ, ಜೀವನ್ಮುಕ್ತಿ ಸಿದ್ಧಾಂತವನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಿದ್ಧೇಶ್ವರ ಸ್ವಾಮಿಗಳು, ‘ಶರಣರು ತತ್ತ್ವದರ್ಶಿಗಳು, ಅವರಾಡಿದ ಮಾತುಗಳು ವಚನಗಳು. ಅವು ಸಾವಿರಾರು. ಅವುಗಳಲ್ಲಿ ಅವರ ಬದುಕು ಮೂಡಿದೆ. ಅನುಭಾವ ತುಂಬಿದೆ; ಅಷ್ಟೇ ಅಲ್ಲ. ವಿಶ್ವ ಹಾಗೂ ವಿಶ್ವಮೂಲ, ಬಂಧ ಹಾಗೂ ಮುಕ್ತಿ ಕುರಿತಾದ ಸೈದ್ಧಾಂತಿಕ ಚಿತ್ರಣಗಳು ಇವೆ. ಈ ವಚನಗಳನ್ನಾಧರಿಸಿ ನಿರ್ಮಾಣವಾದುದು ಈ ಕೃತಿ, ಶರಣರ ನುಡಿಗಳಲ್ಲ. ಚಲ್ಲುವರಿದ ದಾರ್ಶನಿಕ ಹೊಳಹುಗಳನ್ನೆಲ್ಲ ಆಯ್ದು, ಸುಂದರವೂ ತರ್ಕಬದ್ಧವೂ ಆದ ರೀತಿಯಲ್ಲಿ ಪೋಣಿಸಲಾಗಿದೆ. ಇದೊಂದು, ತಾತ್ವಿಕ ಜ್ಞಾನಗುಚ್ಛ: ಸರಳವಾದ ಭಾಷೆ, ಯುಕ್ತವಾದ ಶಬ್ದಗಳು, ತರ್ಕಶುದ್ಧವಾದ ಕಥನ: ಅಸ್ಪಷ್ಟತೆಗೆ ಎಲ್ಲೂ ಅವಕಾಶವಿಲ್ಲ. ದಾರ್ಶನಿಕ ಗ್ರಂಥ ರಚನೆಯಾಗಬೇಕಾದುದು ಈ ರೀತಿಯಲ್ಲಿಯೇ. ಆರು ಅಧ್ಯಾಯಗಳು, ಅಂಗಾಯತ ಪದದ ಅರ್ಥ ವಿಶ್ಲೇಷಣೆಯೊಂದಿಗೆ ಆರಂಭವಾದ ಈ ಗ್ರಂಥ ಜೀವನ್ಮುಕ್ತಿಯ ನಿರೂಪಣೆಯೊಂದಿಗೆ ಮುಚ್ಚಿಕೊಳ್ಳುತ್ತದೆ. ಮಧ್ಯದ ಮಟ ಪುಟದಲ್ಲಿ ಸೈದ್ಧಾಂತಿಕ ಸುಂದರ ವಿವರಣೆಗಳಿವೆ. ತತ್ತ್ವವಿವೇಚನೆಯ ಪ್ರತಿ ಹಂತದಲ್ಲಿ ತಾತ್ವಿಕ ಸಮಸ್ಯೆ ಗಳನ್ನೆತ್ತಲಾಗಿದೆ. ಜಾಗರೂಕತೆಯಿಂದ ಉತ್ತರಿಸಲಾಗಿದೆ. ಪೂರ್ವ-ಪಶ್ಚಿಮಗಳಲ್ಲಿಯ ಚಿಂತಕರ ಚಿಂತನೆಗಳೊಂದಿಗೆ ತೂಗಿ ನೋಡಲಾಗಿದೆ. ನನಗಂತೂ ಈ ಕೃತಿ ಬಹಳ ಹಿಡಿಸಿದೆ. ಇದೊಂದು ಅಪೂರ್ವ ಸೈದ್ಧಾಂತಿಕ ನೇಯ್ದೆ, ಶುದ್ಧ ತರ್ಕದ ಕುಂಚಿನಿಂದ ಮೂಡಿಬಂದ 'ವಚನಗಳಲ್ಲಿ ತತ್ವಮೀಮಾಂಸೆ'! ಈ ಸುಂದರ ಭವ್ಯ ತತ್ತ್ವದರ್ಶನ ಮಾಡಿಸಿದವರು ಪ್ರಾ, ಮಹಾದೇವಪ್ಪನವರು, ಸಾತ್ವಿಕರು, ನುಡಿಯಲ್ಲಿ ನಯ, ನಡೆಯಲ್ಲಿ ನೇಹ, ಆವೇಗ ಆತಂಕಗಳಲ್ಲದ ಬದುಕು. ದಶಕ ದಶಕಗಳ ಕಾಲ ತಾತ್ವಿಕ ಜಗತ್ತಿನಲ್ಲಿ ವಿಹಾರ. ಪೂರ್ವ- ಪಶ್ಚಿಮಗಳಲ್ಲಿ ಅರಳದ ಅಪೂರ್ವ ಚಿಂತನೆಗಳ ಆಸ್ವಾದನೆ. ಆದ್ದರಿಂದಲೇ, ಅವರ ಈ ಕೃತಿಗೆ ಅಷ್ಟು ಬೆಲೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ಎನ್.ಜಿ. ಮಹಾದೇವಪ್ಪ

ಡಾ. ಎನ್. ಜಿ. ಮಹಾದೇವಪ್ಪ ಅವರು ಲೇಖಕರು, ಚಿಂತಕರು. ಮೂಲತಃ ಚಿಕ್ಕಮಗಳೂರಿನವರು.ಲಿಂಗಾಯತ ದರ್ಶನ ಮಾಸಿಕ ಪತ್ರಿಕೆಯ ಸಂಪಾದಕರು.  ಕೃತಿಗಳು: ಲಿಂಗಾಯತರು ಹಿಂದೂಗಳಲ್ಲ (ಲೇಖನಗಳ ಸಂಗ್ರಹ ಕೃತಿ), ವಚನ ಪರಿಭಾಷಾಕೋಶ (ವಚನಗಳ ಸಂಗ್ರಹ ಕೃತಿ),  ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು (ವಿಶ್ಲೇಷಣೆ)  ಪ್ರಶಸ್ತಿ-ಪುರಸ್ಕಾರಗಳು:ಬಸವಕಲ್ಯಾಣದ ವಿಶ್ವ ಬಸವಧರ್ಮ ವಿಶ್ವಸ್ಥ ಸಂಸ್ಥೆಯಿಂದ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಲಭಿಸಿದೆ.   ...

READ MORE

Related Books