ಲೋಕದ ಡೊಂಕು

Author : ಸಂತೆಬೆನ್ನೂರು ಫೈಜ್ನಟ್ರಾಜ್

Pages 88

₹ 80.00




Published by: ಚೇತನ್ ಕನಬುರ್
Address: ಅಕ್ಷರ ಮಂಟಪ, #1667, 6ನೇ ಅಡ್ಡರಸ್ತೆ, 6ನೇ ‘ಸಿ’ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104
Phone: 9986167684

Synopsys

ಲೇಖಕ, ಕವಿ ಸಂತೆ ಬೆನ್ನೂರು ಫೈಜ್ನಟ್ರಾಜ್ ಅವರ ‘ಲೋಕದ ಡೊಂಕು’ ಕೃತಿಯು ಆಧುನಿಕ ವಚನಗಳ ಸಂಗ್ರಹವಾಗಿದೆ. ದಾದಾಪೀರ್ ನವಿಲೇಹಾಳ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, ‘ಫೈಜುಲ್ಲಾ ಅವರ ವಚನಗಳು ವಸ್ತು-ವೈವಿಧ್ಯದಿಂದಾಗಿ ಗಮನಸೆಳೆಯುತ್ತವೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧಗಳು ಕ್ಷುದ್ರಗೊಳ್ಳುತ್ತಿರುವಾಗ ಸಂವೇದನಾಶೀಲನೊಬ್ಬನ ಆತಂಕದ ಪ್ರತಿಕ್ರಿಯೆಗಳಾಗಿ ಈ ವಚನಗಳು ಮಾತನಾಡುತ್ತವೆ. ಇಲ್ಲಿನ ಅಕ್ಷರಗಳು ವ್ಯಕ್ತಿಗತ ನೋವಿನ ನೆಲೆಯನ್ನೂ ದಾಟಿ ಜೀವ ಸಮುದಾಯದ ಸದಾಶಯಗಳನ್ನೂ ಕವಿಮನಸಿನ ಮಧುರಯಾತನೆಯನ್ನಾಗಿಸಿದ ಶಕ್ತಿರೂಪಕಗಳಾಗಿವೆ’ ಎಂದಿದ್ದಾರೆ.

About the Author

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.  ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...

READ MORE

Related Books