ವಚನ ಸಾಹಿತ್ಯ ಭಾಷೆ

Author : ಎಸ್.ಎಸ್. ಅಂಗಡಿ

Pages 172

₹ 60.00




Year of Publication: 2007
Published by: ಲಿಂಗಾಯತ ಅಧ್ಯಯನ ಅಕಾಡೆಮಿ
Address: ನಾಗನೂರು ಶ್ರೀ ರುದ್ರಾಕ್ಷಿಮಠ, ಬೆಳಗಾವಿ

Synopsys

‘ವಚನ ಸಾಹಿತ್ಯ ಭಾಷೆ’ ಕೃತಿಯು ಎಸ್.ಎಸ್. ಅಂಗಡಿ ಅವರ ವಚನ ಸಾಹಿತ್ಯ ವಿಶೇಷವಾಗಿ ಆ ಭಾಷೆಯ ವಿಶೆಷತೆಗಳ ಬರಹವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಗುರುಪಾದ ಮರಿಗುದ್ದಿ‘  ವಚನಕಾರರ ಭಾಷಾಬಳಕೆಯ ರೀತಿ, ಸಾಂಸ್ಕೃತಿಕ ಪ್ರಜ್ಞೆ ಭಾಷಾಶಾಸ್ತ್ರೀಯ ವಿಚಾರಗಳು ಈ ನಿಟ್ಟಿನಲ್ಲಿ ಅಧ್ಯಯನ ರೂಪು ತಾಳಿದೆ. ವಚನಕಾರರು ನಡೆಸಿದ ಆಂದೋಲನಕ್ಕೆ ಅವರ ಭಾಷಾಪ್ರಯೋಗ ಹೇಗೆ ಸಹಕಾರಿಯಾಯಿತು, ಕನ್ನಡ ಭಾಷೆಯ ಚಲನಶೀಲತೆಯನ್ನು ವಚನಕಾರರು ಹೇಗೆ ಪರಿಗ್ರಹಿಸಿದರು ಇಂತಹ ಹಲವು ಪ್ರಶ್ನೆಗಳನ್ನು ಎತ್ತಿಕೊಂಡು ಅಧ್ಯಯನದ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ. ವಚನಕಾರರ ಭಾಷಾಬಳಕೆಯ ಸಾಮಾಜಿಕ ಆಯಾಮ ಅರ್ಥಪೂರ್ಣವಾಗಿ ಮೂಡಿಬಂದಿದೆ. ಡಾ. ಅಂಗಡಿ ಅವರು ಬೆಳಗಾವಿ ಜಿಲ್ಲೆಗೆ ಸೇರಿದವರು. ಆ ಜಿಲ್ಲೆಗೆ ದೊಡ್ಡದಾದ ಪಂಡಿತ ಪರಂಪರೆಯಿದೆ. ಕೆ.ಬಿ. ಪಾಠಕ, ಎಸ್.ಎಂ.ಕತ್ರ, ಶಂ. ಬಾ. ಜೋಶಿ, ಕೆ. ಜಿ. ಕುಂದಣಗಾರ, ಆ ನೇ. ಉಪಾಧ್ಯೆ, ಚ.ನಂದೀಮಠ, ಬೆಟಗೇರಿ ಕೃಷ್ಣಶರ್ಮ, ಡಿ. ಎಸ್. ಕರ್ಕಿ ಮುಂತಾದ ಪೂರ್ವಸೂರಿಗಳು ಅಲ್ಲಿ ಹಿರಿದಾದ ದಾರಿ ನಿರ್ಮಿಸಿದ್ದಾರೆ. ಹೊಸರಚನೆಯ ವಿಧಾನಗಳ ಹಿನ್ನೆಲೆಯಲ್ಲಿ ಆ ಪರ೦ಪರೆಯ ಮುಂದುವರಿಕೆಯಾಗಿ ಕನ್ನಡ ಸಂಶೋಧನ ಭೂಮಿಕೆಯಲ್ಲಿ ಡಾ. ಅಂಗಡಿ ಅವರು ಕಾಣಿಸಿಕೊಳ್ಳುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಸ್.ಎಸ್. ಅಂಗಡಿ
(10 June 1966)

ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ  ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ.  ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...

READ MORE

Related Books