ವಚನಶಾಸ್ತ್ರ ಸಾರ

Author : ಫ.ಗು. ಹಳಕಟ್ಟಿ

Pages 254




Year of Publication: 1939
Published by: ಫ.ಗು. ಹಳಕಟ್ಟಿ
Address: ಹಿತಚಿಂತಕ ಪ್ರಿಂಟಿಂಗ್ ಪ್ರೆಸ್, ಉಪಲಿಬುರುಜ ಬಳಿ, ವಿಜಾಪುರ

Synopsys

ವೀರಶೈವ ಆಚಾರಗಳು ಕುರಿತಂತೆ ‘ವಚನ ಶಾಸ್ತ್ರ ಸಾರ-ಭಾಗ-3' ಕೃತಿಯನ್ನು ಫ.ಗು. ಹಳಕಟ್ಟಿ ಅವರು ರಚಿಸಿದ್ದಾರೆ. ಕೃತಿಯ ಮೊದಲ ಭಾಗದಲ್ಲಿ ಶಿವಶರಣರ ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳು, 2ನೇ ಭಾಗದಲ್ಲಿ ವೀರಶೈವ ಸಿದ್ಧಾಂತವು ನಿರೂಪಿತವಾಗಿದೆ. ಪ್ರಸ್ತುತ ಕೃತಿಯ ಮೂರನೇ ಭಾಗದಲ್ಲಿ ವೀರಶೈವ ಆಚಾರಗಳು ಪ್ರಮುಖವಾಗಿ ವಿವರಿಸಲಾಗಿದೆ. ಇಲ್ಲಿಯೂ ನಾಲ್ಕು ವಿಭಾಗಗಳನ್ನು ಮಾಡಿದ್ದು, ಕ್ರಿಯೆ (ಪುಣ್ಯ-ಪಾಪ, ಸ್ವರ್ಗ-ನರಕ, ಅಂಗ-ಲಿಂಗ..ಗುರು-ಲಿಂಗ-ಜಂಗಮ, ಕಾಯಕ, ದಾಸೋಹ ಹೀಗೆ..), ಆಚಾರ ಭೇದಗಳು (32 ಕಲೆಗಳು, ಸರ್ವಾಚಾರ ಸಂಪತ್ತು, ಷಟಸ್ಥಲ ಆಚರಣೆಗಳು, ಪಂಚಾಚಾರ, ಸಪ್ತಾಚಾರಗಳು.....) ಅಷ್ಟಾವರಣಗಳು (ಅಂತರಂಗದ ಅಷ್ಟಾವರಣಗಳು, ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರ....) ಹಾಗೂ ಕೊನೆಯದಾಗಿ ಗುರು (ಕ್ರಿಯಾ ದೀಕ್ಷೆ, ಲಿಂಗದೀಕ್ಷೆ, ಮಂತ್ರದೀಕ್ಷೆ...ಜಂಗಮ, ಶಿವಯೋಗ...) ಇಂತಹ ಪರಿಕಲ್ಪನೆಗಳನ್ನು ಅನುಭಾವ ನೆಲೆಯಲ್ಲಿ ವಿವರಿಸಲಾಗಿದೆ.

About the Author

ಫ.ಗು. ಹಳಕಟ್ಟಿ
(02 July 1880 - 29 June 1964)

‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. 1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ...

READ MORE

Reviews

ಹೊಸತು-2004- ಆಗಸ್ಟ್‌

ತೋಂಟದಾರ್ಯ ಸಂಸ್ಥಾನ ಮಠ, ಡಂಬಳ - ಗದಗ ವೀರಶೈವ ವಚನಸಾಹಿತ್ಯದಲ್ಲಿ ಹುದುಗಿರುವ ಶಿವತತ್ವ ಚಿಂತನೆಯನ್ನು ಕ್ರೋಢೀಕರಿಸಿ ಸಂಗ್ರಹಿಸಲಾಗಿದೆ. ಶಿವತತ್ವದ ಪರಿಚಯದೊಂದಿಗೆ ಪ್ರಾರಂಭವಾದ ಮೊದಲೆರಡು ಸಂಪುಟಗಳ ಮುಂದುವರಿಕೆಯಾಗಿ ಇದೀಗ ಮೂರನೆಯ ಸಂಪುಟ ಪರಿಷ್ಕರಣಗೊಂಡು ಬಂದಿರುತ್ತದೆ. ಈ ಸಂಪುಟ ಮುಖ್ಯವಾಗಿ ನಾಲ್ಕು ಭಾಗಗಳನ್ನು ಹೊಂದಿದ್ದು ಅಷ್ಟಾವರಣಗಳು, ಆಚಾರ ಭೇದಗಳು, ಕ್ರಿಯೆ ಮತ್ತು ಶಿವಯೋಗದಂತಹ ಮಹತ್ವದ ವಿಷಯಗಳನ್ನು ಹೊಂದಿದೆ. ಎಲ್ಲವೂ ಶಿವಸಾಕ್ಷಾತ್ಕಾರ ಮುಕ್ತಿ ಮಾರ್ಗದ ಕಡೆ ನಡೆವ, ಅಧ್ಯಾತ್ಮಿಕ ಗುರಿಯನ್ನು ಸೇರುವ ಈಶ್ವರ ಸಂಬಂಧೀ ವಿಷಯಗಳು ಹೇರಳವಾಗಿವೆ. ಗ್ರಂಥವನ್ನು ಸಿದ್ಧಪಡಿಸಲು ಭಾರಿ ಸಂಖ್ಯೆಯ ವಚನಕಾರರ ವಚನಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ.

Related Books