ಶರಣ ಸಂಸ್ಕೃತಿ

Author : ಡಿ. ನಾಗರತ್ನ

Pages 104

₹ 120.00




Year of Publication: 2020
Published by: ಇಂದಣೀಲಮಣಿಂ ಪ್ರಕಾಶನ
Address: ಲಕ್ಷ್ಮಿನಗರ, ಬೆಳ್ಕೂಡ, ಚಿಕ್ಕೋಡಿ-591222, ಜಿಲ್ಲೆ ಬೆಳಗಾವಿ
Phone: 9448166990

Synopsys

ಲೇಖಕಿ ಡಿ. ನಾಗರತ್ನ ಅವರ ಕೃತಿ-ಶರಣ ಸಂಸ್ಕೃತಿ. 12ನೇ ಶತಮಾನದ ಶರಣರ ಜೀವನ ಸಂಸ್ಕೃತಿ-ಆಚಾರ -ವಿಚಾರಗಳನ್ನು ಕಟ್ಟಿಕೊಡುವ ಕೃತಿ. ಡಾ. ಕೆ. ರವೀಂದ್ರನಾಥ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಈ ಸಂಶೋಧನಾ ಸಂಕಲನದ ವಿಶೇಷವೆಂದರೆ, ವಚನಗಳನ್ನು ಸಾಮಾಜಿಕ, ಮತ್ತು ಧಾರ್ಮಿಕ ಆವರಣದಲ್ಲಿಟ್ಟು, ತಾತ್ವಿಕತೆಯನ್ನು ಕುರಿತು ಚರ್ಚಿಸಿರುವುದು. ಶರಣರದ್ದು ಷಟಸ್ಥಲ ಮಾರ್ಗ. ತ್ರಿವಿಧ ದಾಸೋಹವೇ ಇದಕ್ಕೆ ರಹದಾರಿ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಶರಣ ಸಿದ್ಧಾಂತದಲ್ಲಿ ಜಂಗಮ ಪರಿಕಲ್ಪನೆ ವಿಶೇಷವಾಗಿದೆ. ಅದೇ ರೀತಿ, ಕಾಯಕ ಮತ್ತು ದಾಸೋಹ ತತ್ವಗಳು ಹೊಟ್ಟೆಪಾಡಿಗೆ ಮಾಡುವ ಕಾಯಕಗಳಲ್ಲ. ಅವುಗಳ ಮೂಲಕ ಸಾಮಾಜೀಕರಣಗೊಳ್ಳಬೇಕು ಎಂಬ ಸಿದ್ಧಾಂತವಿದೆ. ವಚನಗಳ ಮೂಲಕ ಇಲ್ಲಿಯ ಲೇಖನಗಳು ದಾಂಪತ್ಯ, ಬದುಕು, ಸಮಾಜ, ಸಾಹಿತ್ಯ, ಧರ್ಮ ತಾತ್ವಿಕತೆಯನ್ನು ನಿರೂಪಿಸುತ್ತವೆ. ವಚನಕಾರರು ಕಟ್ಟಬಯಸಿದ ವರ್ಗ-ವರ್ಣರಹಿತ ಸಮಾಜದ ಪರಿಕಲ್ಪನೆಯ ಆಶಯವನ್ನು ಇಲ್ಲಿಯ ಬಹುತೇಕ ಲೇಖನಗಳು ಚರ್ಚಿಸುತ್ತವೆ’  ಎಂದು ಪ್ರಶಂಸಿಸಿದ್ದಾರೆ.

 

About the Author

ಡಿ. ನಾಗರತ್ನ

ಲೇಖಕಿ ಡಿ. ನಾಗರತ್ನ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದವರು. ತಂದೆ ಮಹೇಂದ್ರ.ಡಿ, ತಾಯಿ ನಾಗರತ್ನಮ್ಮ.ಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ, ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ ಎ ಕನ್ನಡ ಸಾಹಿತ್ಯದಲ್ಲಿ ಪದವಿ, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ  ಸಂಶೋಧನಾ ವಿದ್ಯಾರ್ಥಿನಿ. . ಕೃತಿಗಳು: ಶರಣ ಸಂಸ್ಕೃತಿ (ವಿಮರ್ಶಾ ಲೇಖನಗಳ ಸಂಗ್ರಹ) ...

READ MORE

Related Books