ಜೇಡರ ದಾಸಿಮಯ್ಯನವರ ವಚನ ಪದಪ್ರಯೋಗ ಕೋಶ

Author : ಮಡಿವಾಳ ಸ್ವಾಮಿ

Pages 164

₹ 100.00




Year of Publication: 2007
Published by: ಲಿಂಗಾಯತ ಅಧ್ಯಯನ ಅಕಾಡೆಮಿ
Address: ನಾಗನೂರ ರುದ್ರಾಕ್ಷಿಮಠ, ಬೆಳಗಾವಿ
Phone: 08312470112

Synopsys

‘ಜೇಡರ ದಾಸಿಮಯ್ಯನವರ ವಚನ ಪದಪ್ರಯೋಗ ಕೋಶ’ ಕೃತಿಯು ಮಡಿವಾಳ ಸ್ವಾಮಿಗಳಿಂದ ರಚಿತಗೊಂಡ ವಚನ ಪದಪ್ರಯೋಗ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ; ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ಸ್ವಾಮಿಗಳು ಅಪಾರ ಪರಿಶ ಮದಿಂದ ಈ ಕೋಶವನ್ನು ಸಿದ್ಧಪಡಿಸಿದ್ದಾರೆ. ಮೃದು ಮತ್ತು ಮಿತಭಾಷಿಗಳಾದ ಪೂಜ್ಯರು ಸತತ ಅಧ್ಯಯನಶೀಲರು. ದಕತೆ, ಪ್ರಾಮಾಣಿಕತೆಗೆ ಹೆಸರಾದವರು, ಅವರ ಶ್ರಮ ಮತ್ತು ಶ್ರದ್ಧೆಗಳು ಕೃತಿ ಯುದ್ದಕ್ಕೂ ಕಂಡು ಬರುವ ಪ್ರಮುಖ ಅಂಶಗಳು, ನಾಡಿನ ವಚನ ಸಾಹಿತ್ಯ ಪ್ರೇಮಿಗಳು, ಸಂಶೋಧಕರು ಈ ಕೋಶವನ್ನು ಆದರದಿಂದ ಬರಮಾಡಿ ಕೊಳ್ಳುವರೆಂದು ಭಾವಿಸುವವು. ಜೇಡರ ದಾಸಿಮಯ್ಯನವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರಾಗಿದ್ದು, ವಚನ ಚಳುವಳಿ ಹಾಗೂ ಅನುಭವ ಮಂಟಪದ ಚರ್ಚೆಯಲ್ಲಿ ಭಾಗವಹಿಸಿದ ಪ್ರಮುಖ ವಚನಕಾರರೆನಿಸಿದ್ದಾರೆ. ತತ್ಕಾಲೀನ ಸಾಮಾಜಿಕ ಅನಿಷ್ಟಗಳನ್ನು ಬಹುಕಟುವಾಗಿ ಟೀಕಿಸಿದ ಅವರು ಗಂಡು ಹೆಣ್ಣುಗಳ ಸಮಾನತೆಯನ್ನು ಪ್ರತಿಪಾದಿಸುವುದಲ್ಲದೆ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರಸಾರ ಮಾಡಿದ್ದಾರೆ. ಭಕ್ತರ ಮನೆಯ ಅಂಗಳದೇ ವಾರಣಾಸಿ, ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡಶರಣರ ನುಡಿಗಡಣವೆ ಕಡಲು ಎಂದು ಹೇಳುವ ಜೇಡರ ದಾಸಿಮಯ್ಯನವರು ತಮ್ಮ ವಚನಗಳಲ್ಲಿ ಭಕ್ತರ - ಶರಣರ ಗುಣಾತಿಶಯವನ್ನು ಮನದುಂಬ ಸ್ಮರಿಸುತ್ತಾರೆ. ಅವರ ಮಹತ್ವದ ವಚನಗಳಿಗೆ ಪದಪ ಯೋಗ ಕೋಶದ ಆವಶ್ಯಕತೆಯನ್ನು ಮನಗಂಡು ಪೂಜ್ಯ ಶ್ರೀ ಮಡಿವಾಳ ಸ್ವಾಮಿಗಳವರು ಆ ಕಾರ್ಯವನ್ನು ಆಗು ಮಾಡಿದ್ದಾರೆ ಎಂದಿದೆ.

About the Author

ಮಡಿವಾಳ ಸ್ವಾಮಿ

ಮಡಿವಾಳ ಸ್ವಾಮಿ ಅವರು ಬೆಳಗಾವಿ ಜಿಲ್ಲೆಯ  ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದವರು. ಅಧ್ಯಯನಶೀಲರು. ವಚನ ಸಾಹಿತ್ಯದ ಕಡೆಗೆ ಬಹುವಾಗಿ ಒಲವುಳ್ಳವರು.  ಕೃತಿಗಳು : ಜೇಡರ ದಾಸೀಮಯ್ಯನವರ ವಚನ ಪದಪ್ರಯೋಗ ಕೋಶ. ...

READ MORE

Related Books