ಮಾನವತವಾದಿ ಬಸವಣ್ಣ

Author : ಚಂದ್ರಶೇಖರ ವಸ್ತ್ರದ

₹ 100.00




Published by: ಲಡಾಯಿ ಪ್ರಕಾಶನ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಪ್ರಾಚೀನ ಪ್ರತಿಭೆಗಳಲ್ಲಿ ಬಸವಣ್ಣನವರಷ್ಟು ನಮ್ಮ ಮನಸ್ಸನ್ನು ಯಾರೂ ಕಾಡಿದವರಿಲ್ಲ. ಬರೆದಷ್ಟು ಬರೆಯಿಸಿಕೊಳ್ಳುವ ಈತ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ರೂಪಗಳಲ್ಲಿ ಎಲ್ಲ ರೀತಿಗಳಲ್ಲಿ ಮೂಡಿ ಬರುತ್ತಲಿರುವುದೇ ಒಂದು ಸೋಜಿಗ. ಈಗ ಅಂತಹ ಒಂದು ಹೊಸ ಸೋಜಿಗವೆನಿಸಿದೆ, ' ಮಾನವತಾವಾದಿ ಬಸವಣ್ಣ’ ಈ ಗ್ರಂಥ ಸೃಜನ ಮತ್ತು ಸಂಶೋಧನೆಗಳ ಕೂಡಲಸಂಗಮವೆನಿಸಿದೆ. ಸೃಜನದ ಸೊಗಸಾದ ಕಲ್ಪನೆ, ಸಂಶೋಧನೆಯ ನಿಷ್ಠೂರ ಸತ್ಯಗಳ ಈ ಕೃತಿಸಂಗಮದಲ್ಲಿ ಬಸವಣ್ಣ ಪ್ರವಸುತ್ತಲಿರುವ ಬಗ್ಗೆ ತುಂಬಾ ಆಕರ್ಷಕವಾಗಿದೆ. ಸಂಶೋಧನೆ ಕಾರಣವಾಗಿ ಅನೇಕ ಸಂದೇಹಗಳಿಗೆ ಇಲ್ಲಿ ಸಮಾಧಾನವಿದೆ, ಪ್ರಶ್ನೆಗಳಿಗೆ ವಚನಗಳಿಂದಲೇ ಉತ್ತರಿಸಿದ ಪ್ರಾಮಾಣಿಕ ಪ್ರಯತ್ನವಿದೆ. ಈ ಕಾರಣದಿಂದಾಗಿ ಪ್ರಸ್ತುತ ಕೃತಿ ಸಾಮಾನ್ಯರನ್ನು ವಿದ್ವಾಂಸರನ್ನು ಏಕ ಕಾಲಕ್ಕೆ ಒಳಗೆ‌ ಸೆಳೆಯುತ್ತದೆ. 'ಯಕ್ಷಗಾನೀಯ ಶೈಲಿ ' ಈ ಗ್ರಂಥದ ಇನ್ನೊಂದು ಆಕರ್ಷಣೀಯವೆನಿಸಿದೆ. ಆಗಾಗ ಲೇಖಕರು ಭಾಗವತ ನಂತೆ ಮಧ್ಯೆ ಮಧ್ಯೆ ಬಂದು ಪಾತ್ರ ಪಾತ್ರಗಳಲ್ಲಿ ಪಾತ್ರ ಓದುಗನಲ್ಲಿ ಕೊಂಡಿಯಾಗಿ ನಿಲ್ಲುವ ಬಗೆ, ಶೈಲಿಗೆ ವಿನೂತನತೆಯನ್ನು ತಂದು ಕೊಟ್ಟಿದೆ. ಇದರಿಂದಾಗಿ ಒಂದು ಹೊಸ ಶೈಲಿ ಮಾದರಿ ಇಲ್ಲಿ ಆಕಾರ ಪಡೆದಿತ್ತು ಚಂದ್ರಶೇಖರ ವಸ್ತ್ರದ ಅವರು ಈ ಆದರ್ಶದಲ್ಲಿ ಮಿಕ್ಕ ಶರಣ ಶಿಲ್ಪಿಗಳನ್ನು ಕಂಡರಿಸುವರೆಂದು ಹಾರೈಸುತ್ತೇನೆ .

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books