ಶ್ರೀವಿಜಯ ಸ್ವಗತ

Author : ವಿಜಯಲಕ್ಷ್ಮಿ ಕೊಟಗಿ

Pages 72

₹ 0.00




Year of Publication: 2021
Published by: ವಿಜಯ ಲಕ್ಷ್ಮಿ ಕೊಟಗಿ
Address: 'ಸಮೃದ್ಧಿ' ನಂದಿ ನಗರ 4 ನೇ ಅಡ್ಡ ರಸ್ತೆ, ಕೊಪ್ಪಳ-583231 ತಾ:ಜಿ: ಕೊಪ್ಪಳ.
Phone: 9632240787

Synopsys

ವಿಜಯಲಕ್ಷ್ಮಿ ಕೊಟಗಿ ಅವರ ವಚನಗಳ ಸಂಗ್ರಹ ‘ ಶ್ರೀವಿಜಯ ಸ್ವಗತ’.  ಅದರ ಉಪಶೀರ್ಷಿಕೆ *ಬಸವ ಬಾಳ್ಬನದ ತಂಪು*. ಇದೊಂದು ಆಧುನಿಕ ವಚನಗಳ ಗೊಂಚಲು. *ಶ್ರೀವಿಜಯ* ಎಂಬ ಅಂಕಿತನಾಮ ಇಟ್ಟುಕೊಂಡ ಕವಯತ್ರಿ ಸಮಾಜದಲ್ಲಿರುವ ಕುಂದುಕೊರತೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಆಧ್ಯಾತ್ಮ , ಶರಣ ಸತ್ಸಂಗ, ಸನ್ನೆಡೆಯ ಜೀವನ, ಸದಾಚಾರ ಸುವಿಚಾರಗಳ ಬಗ್ಗೆ ಸಾಕಷ್ಟು ವಚನಗಳಿವೆ. ಮೂಢನಂಬಿಕೆ, ಅನೀತಿ, ಮಹಿಳಾ ಶೋಷಣೆ, ಅರಿಷಡ್ವರ್ಗದ ಲಾಲಸೆಗಳು, ಕ್ರೂರ ಸಂಪ್ರದಾಯಗಳು, ಸ್ವಾರ್ಥ, ಅಧಿಕಾರದ ದಾಹ, ರಾಜಕೀಯ ದೊಂಬರಾಟ, ಸ್ವಾಮಿಗಳ ಅಧರ್ಮದ ನಡೆ ಮುಂತಾದ ವಿಷಯಗಳನ್ನು ತುಂಬಾ ಚೆನ್ನಾಗಿ ಎಳೆಎಳೆಯಾಗಿ ವಿಮರ್ಶಿಸಿದ್ದಾರೆ‌. ಬಸವಣ್ಣನವರ ಹಾದಿಯಲ್ಲಿ ಸಾಗಿ "ಉಂಬ ಜಂಗಮ ಮತ್ತು ಉಣ್ಣದ ಲಿಂಗದ" ವಚನದ ಹಾಗೆ ಹಸಿದವರಿಗೆ ಆಹಾರ ಪದಾರ್ಥಗಳನ್ನು ವ್ಯರ್ಥಗೊಳಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಣ್ಣು-ಹೊನ್ನು-ಮಣ್ಣು ಮತ್ತು ಅಧಿಕಾರಕ್ಕಾಗಿ ಬಡಿದಾಡುವ ಮೂಲಕ ಗುರು-ಲಿಂಗ-ಜಂಗಮದ ಅರಿವಿರದ ಮೂಢರು ಜರಿಯುತ್ತಾರೆ. ಬಾಗುವುದು ಸದ್ವಿನಯ ,ಸಹನೆ, ಮೌನ ದೌರ್ಬಲ್ಯವಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರಲ್ಲದೆ ನಡೆ-ನುಡಿ ಒಂದಾದಾಗ ಮಾತ್ರ ದೇವನೊಲುಮೆ ಸಾಧ್ಯ ಎಂಬುದನ್ನು ಮನಗಾಣಿಸುತ್ತಾರೆ. ಜಾತಿ ಮತ ಪಂಗಡಗಳ ಬಗ್ಗೆ ಸ್ವಾರ್ಥಸಾಧನೆಗಾಗಿ ಜನಮಾನಸದಲ್ಲಿ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರನ್ನು ಅವರವರ ಕರ್ಮ ತಡೆಯದೆ ಬಿಡದು. ಅದರಿಂದ ಪಾರಾಗಲು ದೇವನಿಗೆ ಶರಣಾಗುವುದೇ ಮಾರ್ಗ ಎಂಬುದನ್ನು ಮಾರ್ಮಿಕವಾಗಿ ಬರೆದಿರುವರು. ನಿರಾಕಾರ ದೇವನನ್ನು ಸಾಕಾರಗೊಳಿಸಿದ ಶರಣರು ದೇವನ ಕುರುಹಾಗಿ ಅಪ್ಪ ಬಸವಣ್ಣನವರನ್ನು ಚಿರಸ್ಥಾಯಿಯಾಗಿ ಮೂರ್ತಿ ಗೊಳಿಸಿದರು ಮತ್ತು ಮುಂದಿನ ಪೀಳಿಗೆಗೆ ಬಸವತತ್ವ ಬೆಳೆಯಲು ಸಹಕಾರಿ ಆಗಬಹುದೆಂದು ಆಶಿಸಿದ್ದರು.

About the Author

ವಿಜಯಲಕ್ಷ್ಮಿ ಕೊಟಗಿ
(01 June 1968)

ಕೊಪ್ಪಳ ಜಿಲ್ಲೆಯ ವಿಜಯಲಕ್ಷ್ಮಿ ಕೊಟಗಿಯವರು ವೃತ್ತಿಯಿಂದ ಶಿಕ್ಷಕಿಯಾದರೂ ಪ್ರವೃತ್ತಿಯಿಂದ ಕವಯತ್ರಿ ಮತ್ತು ಕಲಾವಿದೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಅಪಾರವಾಗಿ ಪ್ರೀತಿಸುವ ಇವರು ಸದಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅನೇಕ ಸಾಹಿತ್ಯ ಸಮ್ಮೇಳನ ಮತ್ತು ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೇ *ನನ್ನೊಳಗಿನ ನಾನು, ಕೆಂಡದ ಉಡಿಯಕ್ಕಿ, ಮುತ್ತಿನ ಕುಂಚಿಗೆ, ಮಿಂಚುಹನಿ* ಕೃತಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈಗ *ಶ್ರೀವಿಜಯ ಸ್ವಗತ* ಆಧುನಿಕ ವಚನಗಳು ಮತ್ತು *ಅರಳದ ಅಲರು* ಸಣ್ಣ ಕಥಾ ಸಂಕಲನ ಲೋಕಾರ್ಪಣೆಗೊಳ್ಳಬೇಕಿದೆ. ಸ್ತ್ರೀಪರ ನೆಲೆಯಲ್ಲಿ ಸೂಕ್ಷ್ಮ ಸಂವೇದಿ ಬರಹದ ಈ ಕೃತಿಗಳು ಎಲ್ಲರ ಮೆಚ್ಚುಗೆಗೆ ...

READ MORE

Related Books