
‘ಶರಣರ ವಚನಗಳು’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ವಚನಗಳ ಕುರಿತು ರಚಿಸಿರುವ ಕೃತಿ. 12ನೇ ಶತಮಾನದಿಂದ ಈ ಹೊತ್ತಿನವರೆಗೂ ವಚನಗಳು ಸಾಂಸ್ಕೃತಿಕವಾಗಿ ಉಂಟು ಮಾಡಿದ ಪರಿಣಾಮ ಚಿಗುರುಗೊಳಿಸುತ್ತವೆ. ವಚನಗಳು ಬಹು ಆಯಾಮಗಳನ್ನು ಹೊಂದಿರುವುದರಿಂದ ಅವು ಹಲವು ನೆಲೆಯಲ್ಲಿ ಚಿಂತನೆಗೆ ಒಳಗಾಗಿವೆ. ಚಿಂತನೆಗೆ ನೆಲೆಯೂ ಆಗಿ ನಿಂತಿವೆ.
ವಿದ್ವಾಂಸರು, ಚಿಂತಕರು ವಚನಗಳ ಮೂಲಕ ತಮ್ಮ ಕಾಲದ ವಿದ್ಯಮಾನಗಳನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಆಧುನಿಕ ಸಾಹಿತ್ಯ ಸೃಷ್ಟಿಯ ಹಿಂದೆ ವಚನಗಳ ಅಧ್ಯಯನದ ಛಾಯೆ ಇದೆ. ಅಂಜನಾ ಕೃಷ್ಣಪ್ಪನವರು ವಚನಗಳನ್ನು ಅಧ್ಯಯನ ಮಾಡಿದ ರೀತಿ ಹಾಗೂ ಅವುಗಳಿಂದ ಪಡೆದ ಪ್ರೇರಣೆಗಳು ಈ ಕೃತಿಯ ವಿಶೇಷತೆ.
©2025 Book Brahma Private Limited.