ಜಾತ್ರೆ (ವೈದೇಹಿ)

Author : ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

Pages 72

₹ 60.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಏನಿದು? ಕತೆಯೆ, ಕಾದಂಬರಿಯೆ, ನಾಟಕವೆ, ಪ್ರಬಂಧವೆ, ಕಾವ್ಯವೆ...? ಯಾವುದೂ ಅಲ್ಲ, ಎಲ್ಲವೂ ಹೌದು - ಎನ್ನುವಂತಿದೆ ಈ ಕೃತಿ. ಮೇಲ್ಮೆ ಯಲ್ಲಿ ಸಂಭ್ರಮ, ಉಲ್ಲಾಸ, ಮುದ, ಹಾಸ್ಯ, ಮುಗ್ಧತೆ; ತಳದಲ್ಲಿ ವೈಚಾರಿಕತೆ, ವ್ಯಾಕುಲತೆ, ಜಾತಿ, ವರ್ಗ, ಸಮಾಜ, ಹಲವು ಅಪ್ಪಟ ಸ್ತ್ರೀಕ್ಷಣಗಳು... ಒಟ್ಟಾರೆ ಮಾನವ ಕ್ಷಣಗಳು... ಜೊತೆಗೆ ಪ್ರಾದೇಶಿಕ ಕನ್ನಡದ ಸೊಗಡು... ಜಗತ್ತನ್ನು ಜಾತ್ರೆಯ ಮೂಸೆಯಲ್ಲಿಟ್ಟು ತಿಳಿತಿಳಿಯಾಗಿ ಹೇಳುತ್ತಲೇ ಗಾಢವಾಗಿ ಜೀವನ ಚಕ್ರವನ್ನು ಶೋಧಿಸುವ ಅಪೂರ್ವ ಬರವಣಿಗೆ ಇದು. ಈ ಕಿರು ಕೃತಿಯಲ್ಲಿ ಜಾತ್ರೆ ಒಂದು ಜೀವಂತ ಅನುಭವವಾಗಿ ನಮ್ಮನ್ನು ಒಳಗೊಳ್ಳುತ್ತದೆ... ಇಲ್ಲಿ ಭೂತ ವರ್ತಮಾನ ಭವಿಷ್ಯ ಕಾಲಗಳೆಲ್ಲವೂ ನಡುವೆ ಗೆರೆ ಎಳೆಯಲಾರದಂತೆ ಸಂಗಮಿಸಿವೆ…

About the Author

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
(12 February 1945)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...

READ MORE

Related Books