ಊರ ಬೀದಿಯ ಸುತ್ತು

Author : ಎಂ.ಆರ್. ಕಮಲ

Pages 182

₹ 175.00




Year of Publication: 2020
Published by: ಕಥನ ಪ್ರಕಾಶನ
Address: ನಾಗರಭಾವಿ, ಬೆಂಗಳೂರು
Phone: 9880892243

Synopsys

ಲೇಖಕಿ ಎಂ.ಆರ್. ಕಮಲ ಅವರ ‘ಕಾಳನಾಮ ಚರಿತ್ರೆ ’ಯ ಮುಂದುವರೆದ ಭಾಗವೇ-ಊರ ಬೀದಿಯ ಸುತ್ತು. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಕೇಶವ ಮಳಗಿ  “ ಬದುಕಿನ ಸಮಸ್ಯೆಯಲ್ಲಿ ಸಿಲುಕಿ ಸೊರಗಿದಾಗ ಒಂದು ಹಾಡು, ಹಕ್ಕಿಯ ಕೂಗು, ಮಗುವಿನ ಅಳು, ಒಂದು ಸಾಂತ್ವನದ ನುಡಿ ಮತ್ತೆ ಜೀವಜಲ ಉಕ್ಕಿಸುವಂತೆ ಈ ಬರಹಗಳೂ ಬದುಕಿನ ಕುರಿತು ಹೊಸ ಭರವಸೆಯನ್ನು ಮೂಡಿಸಬಲ್ಲವು. ನಿತ್ಯಬದುಕಿನ ಜಂಜಡಗಳಲ್ಲಿ ನಿರ್ಲಕ್ಷಿಸಿ ಬಿಡಬಲ್ಲ ಸಣ್ಣಸಂಗತಿಗಳ ಹಿಂದೆ ಅಡಗಿರುವ ಸೊಬಗು, ಜೀವನಸೌಂದರ್ಯವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಮುಕ್ತವಾಗಿ ಸ್ವೀಕರಿಸಿ, ಮನಸ್ಸನ್ನು ಕಹಿಯಾಗಿಸಿಕೊಳ್ಳದೆ ನಿರರ್ಥಕವೆನ್ನುವುದರಲ್ಲಿ ಹಿರಿದಾದ ಅರ್ಥವನ್ನು, ಸಿಪ್ಪೆಯಲ್ಲಿ ಸತ್ವವನ್ನು ಹುಡುಕುವ ಪರಿಯಿಂದ ಈ ಹಗುರ ಹರಟೆಗಳು ಆಕರ್ಷಕವಾಗಿವೆ. ಗಾಳಿಯ ಲಘುತ್ವ, ಮುಗ್ಧತೆ ಮತ್ತು ಉಳಿದವರಿಗೆ ಸಂಕೀರ್ಣವಾಗಿ ಕಂಡದ್ದರಲ್ಲಿ ನಿಷ್ಕಪಟತೆಯನ್ನು ಅರಸುವ ಉತ್ಸಾಹ ಈ ಬರಹಗಳ ಹಿಂದಿದೆ. ವಿನೋದಪ್ರಜ್ಞೆ ವಸ್ತುಭಾರವಾಗದಂತೆ ವಹಿಸುವ ಎಚ್ಚರ, ಎಲ್ಲಕ್ಕಿಂತ ಮಿಗಿಲಾಗಿ ಒಣಬೌದ್ಧಿಕ ಕಸರತ್ತುಗಳಿಲ್ಲದ ನೇರವಂತಿಕೆ ಈ ಸಲ್ಲಾಪಗಳ ಗುಣಾತ್ಮಕತೆಯನ್ನು ಹೆಚ್ಚಿಸಿವೆ.” ಎಂದು ವಿಮರ್ಶಿಸಿದ್ದಾರೆ.

About the Author

ಎಂ.ಆರ್. ಕಮಲ
(27 March 1959)

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...

READ MORE

Related Books