ಎನ್‍ಸಿಸಿ ದಿನಗಳು

Author : ಜಿ.ಟಿ. ನಾರಾಯಣರಾವ್

Pages 482

₹ 55.00




Year of Publication: 1972
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

'ನಕ್ಷತ್ರಲೋಕ,' 'ಮಾನವ ಚಂದ್ರನ ಮೇಲೆ,' 'ವೇಗ,' 'ವಿಜ್ಞಾನ ನಿರ್ಮಾಪಕರು' ಮುಂತಾದ ವಿಜ್ಞಾನ ಗ್ರಂಥಗಳನ್ನೂ ಹಲವಾರು ಜನಪ್ರಿಯ ವಿಜ್ಞಾನ ಲೇಖನಗಳನ್ನೂ ಬರೆದು ಓದುಗರಿಗೆ ಪರಿಚಿತರಾಗಿರುವ ಜಿ. ಟಿ. ನಾರಾಯಣರಾಯರು ಎನ್‌ ಸಿಸಿಯಂತಹ ವಿದ್ಯಾರ್ಥಿ ಜೀವನದ ಬಗ್ಗೆಯೂ ಬರೆದಿರುವುದು ವಿಶೇಷ. 

ಆಲೀವ್‌ ಹಸಿರಿನ ಸಮವಸ್ತ್ರ ತೊಟ್ಟು ಸೇನಾನಿಯಂತೆ ಕನಸು ಕಾಣುತ್ತ ಶಿಸ್ತಾಗಿ ಹೆಜ್ಜೆ ಇರಿಸುವ ಎನ್‌ಸಿಸಿಯಂತಹ ವಿಶಿಷ್ಟ ಸಂಘಟನೆಯನ್ನು ತಮ್ಮದೇ ಬದುಕಿನ ಸ್ವಾರಸ್ಯಕರ ಸಂಗತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. 

ಎನ್‌ಸಿಸಿ ಸಾಹಸಿಗರನ್ನೂ ರೂಪಿಸುತ್ತದೆ. ಜಿ.ಟಿ ನಾರಾಯಣರಾವ್ ಅಂತಹ ಸಾಹಸಿ. ಸಾಹಿತ್ಯದಲ್ಲೂ, ಬದುಕಿನ ರೀತಿಯಲ್ಲೂ ಅವರ ಸಾಹಸಗಳು ದೃಗ್ಗೋಚರವಾಗುವಂತಿವೆ. ಆ ಸಾಹಸ ಅವರ ಮುಂದಿನ ತಲೆಮಾರಿಗೂ ದಾಟಿರುವುದು ವಿಶೇಷ. ಅದೇನೇ ಇರಲಿ ವಿದ್ಯಾರ್ಥಿಗಳಲ್ಲಿ ಯುವಕರಲ್ಲಿ ಚಿಮ್ಮು ಉತ್ಸಾಹ ರೂಪಿಸುವ ಕೃತಿ ಸಂಗ್ರಹ ಯೋಗ್ಯ. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books