ಒಂಟಿ ಮನೆಯ ಪುಟಾಣಿ

Author : ಅಮೃತಾ ರಕ್ಷಿದಿ

Pages 144

₹ 130.00




Year of Publication: 2017
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು-9

Synopsys

ರಂಗಭೂಮಿಯಲ್ಲಿ ನಟಿಯಾಗಿ, ವಿನ್ಯಾಸಗಾರ್ತಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡ ಅಮೃತಾ ರಕ್ಷಿದಿ ಅವರ ಜೀವನಾನುಭವಗಳನ್ನು ಅವರ ಈ ಆತ್ಮಕತೆ ’ಒಂಟಿ ಮನೆಯ ಪುಟಾಣಿ’ ಪುಸ್ತಕ ಒಳಗೊಂಡಿದೆ.

ತಮ್ಮ ಬಾಲ್ಯದ ದಿನಗಳಿಂದಲೇ ಪ್ಯಾರಾನಾಯ್ಡ್, ಸ್ಕಿಝೋಫ್ರೇನಿಯಾ ಎಂಬ ಖಾಯಿಲೆಗಳಿಂದ ಬಳಲುತ್ತಿದ್ದ ಲೇಖಕಿ ಅಮೃತಾ ಅವರ ’ಅಮೃತಯಾನ’ ಪುಸ್ತಕ ಸುಮಾರು ಐದು ಸಂಪುಟಗಳಲ್ಲಿ ಅವರ ಅನುಭವ ಕಥನವನ್ನು ದಾಖಲಿಸಿದೆ. ಲೇಖಕಿಯ ನೆನಪಿನ ಶಕ್ತಿಯ ಅನುಭವ ಕಥನದಲ್ಲಿ ಈ ಕೃತಿಯೂ ಒಂದು.  ಬದುಕಿನ ಅದಮ್ಯ ಆಸೆ, ಆಕಾಂಕ್ಷೆಗಳನ್ನು ತನ್ನ ಪುಟ್ಟ ಪ್ರಪಂಚದ ಬಚ್ಚಿಟ್ಟುಕೊಂಡ ನೂರಾರು ಕನಸುಗಳನ್ನು ಮುಕ್ತವಾಗಿ ಓದುಗರಿಗೆ ನೀಡಿದ್ದಾರೆ.

About the Author

ಅಮೃತಾ ರಕ್ಷಿದಿ - 04 September 2017)

ರಕ್ಷಿದಿ ಎಂಬ ಮಲೆನಾಡಿನಲ್ಲಿ ಹುಟ್ಟಿದ ಅಮೃತಾ ’ಅಮೃತಯಾನ’ ಎಂಬ ಐದು ಸಂಪುಟಗಳ ಲೇಖಕಿ. ಸಣ್ಣ ವಯಸ್ಸಿನಲ್ಲಿ ಕಾಣಿಸಿದ ಪ್ಯಾರನಾಯ್ಡ್‌ ಸ್ಕಿಝೋಫ್ರೇನಿಯಾದ ಜೊತೆ ಸೆಣೆಸಿದ ಅಮೃತಾ ಬದುಕಿದ್ದು ಕೇವಲ ಎರಡು ದಶಕ ಮಾತ್ರ. 2017ರಲ್ಲಿ ’ಅಮೃತಾ’ ಎಂಬ ಹುಡುಗಿ ಬರೆದ ಜೀವನ ಚರಿತ್ರೆಯ ಐದು ಸಂಪುಟ ಬಿಡುಗಡೆಯಾಗುವ ಮುನ್ನವೇ ಕಾಲನ ಮನೆಯತ್ತ ಪಯಣ ಬೆಳೆಸಿದಳು. ಎರಡು ವರ್ಷದ ಮಗುವಾಗಿದ್ದಾಗಲೇ ಕಾಣಿಸಿಕೊಂಡ ಕಾಯಿಲೆ ಕೊನೆಯವರೆಗೂ ಅವಳನ್ನು ಕಾಡಿತು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಎರಡು ದಶಕದ ಅವಧಿಯನ್ನು ಅಕ್ಷರದಲ್ಲಿ ಹಿಡಿದಿಟ್ಟಳು. ಈ ಕತೆಯಲ್ಲಿ ಅಮೃತಾ ’ತನ್ನ ಕತೆ’ ಹೇಳುವುದಿಲ್ಲ. ಆದ್ದರಿಂದ ...

READ MORE

Related Books