ನನಗೆ 'ಬೈ-ಪಾಸ್' ಆಯಿತು

Author : ಎಚ್.ಡಿ. ಚಂದ್ರಪ್ಪಗೌಡ

Pages 120

₹ 65.00




Year of Publication: 2002
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ನನಗೆ "ಬೈ-ಪಾಸ್‌' ಆಯಿತು’ ಎಚ್‌.ಡಿ. ಚಂದ್ರಪ್ಪಗೌಡ ಅವರ ಅನುಭವಕಥನವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಎಳೆಯ ವಯಸ್ಸಿನವರನ್ನೂ ಬಿಡದೆ ಕಾಡುತ್ತಿದೆ. ಈ ಕೃತಿಯ ಲೇಖಕರಾದ ಪ್ರಸಿದ್ಧ ಶಸ್ತ್ರವೈದ್ಯ ಚಂದ್ರಪ್ಪಗೌಡರು ಬೈ-ಪಾಸ್‌ ಸರ್ಜರಿಗೊಳಪಟ್ಟು ಹೃದ್ರೋಗಿಯಾಗಿ ಸ್ವತಃ ಆತಂಕದ ಕ್ಷಣಗಳನ್ನೆದುರಿಸಿದ ಸ್ವಾನುಭವ ಕಥನವನ್ನು ನಿರೂಪಿಸಿದ್ದಾರೆ.

About the Author

ಎಚ್.ಡಿ. ಚಂದ್ರಪ್ಪಗೌಡ
(29 June 1929)

ಡಾ. ಚಂದ್ರಪ್ಪಗೌಡ ಎಚ್.ಡಿ ಅವರು  29-6- 1929 ಹೊಳೆಗದ್ದೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ವೈಜ್ಞಾನಿಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರು ಆರೋಗ್ಯದ ಕುರಿತಾಗಿ, ಮತ್ತು ಸೃಜನಶೀಲವಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಲೋಕದ ಕೌತುಕಗಳು, ಕುಸಿದುಬೀಳದಂತೆ ತಡೆಯುವುದು ಹೇಗೆ, ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕುವೆಂಪು ವೈದ್ಯ ಸಾಹಿತ್ಯ ಪುರಸ್ಕಾರ, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್.ಡಿ.ಚಂದ್ರಪ್ಪಗೌಡ ಅವರ ಮುಖ್ಯ ಕೃತಿಗಳು : ಜೋಸೆಫ್ ಆಸ್ಟರ್, ವೈದ್ಯವಿಜ್ಞಾನ ಸಾಧಕರು, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ...

READ MORE

Reviews

ಹೊಸತು- ಮೇ -2003

ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು ಗುರುವ ಹೃದಯಾಘಾತದಿಂದ ಅಸುನೀಗುವವರ ಸಂಖ್ಯೆ ಗಣನೀಯವಾಗಿ ಏರಿದೆ. ಎಳೆಯ ವಯಸ್ಸಿನವರನ್ನೂ ಬಿಡದೆ ಕಾಡುತ್ತಿದೆ. ಈ ಕೃತಿಯ ಲೇಖಕರಾದ ಪ್ರಸಿದ್ಧ ಶಸ್ತ್ರವೈದ್ಯ  ಚಂದ್ರಪ್ಪಗೌಡರು ಬೈ-ಪಾಸ್‌ ಸರ್ಜರಿಗೊಳಪಟ್ಟು ಹೃದ್ರೋಗಿಯಾಗಿ ಸ್ವತಃ ಆತಂಕದ ಕ್ಷಣಗಳನ್ನೆದುರಿಸಿದ ಸ್ವಾನುಭವ ಕಥನವನ್ನು ನಿರೂಪಿಸಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ವಿವರಗಳನ್ನು ಕೊಡುತ್ತ ಕಾಯಿಲೆ ಏಕೆ ಬರುತ್ತದೆಂದು ವಿಶ್ಲೇಷಿಸುತ್ತ ಕೃತಿಯನ್ನು ಒಂದು ಮಾಹಿತಿಯ ಆಕಾರವನ್ನಾಗಿಸಿದ್ದಾರೆ.

Related Books