ಕಾಡು ಕಾಡ್ತು

Author : ರೇಖಾ ಹೆಗಡೆ ಬಾಳೇಸರ

Pages 100

₹ 130.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

‘ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ. ಒಂಥರಾ 'ಸುಂಯ್' ಎಂದು ಸದ್ದು ಮಾಡುವ ಬಿದಿರು ಮಟ್ಟಿಗಳು, ಆ ಮಟ್ಟಿಗಳ ಬುಡದಲ್ಲಿ ಬಿದ್ದಿರುತ್ತಿದ್ದ ಪುಟ್ಟ ಪುಟ್ಟ ನವಿಲು ಗರಿಗಳು. ನುಣ್ಣನೆ ನುಣುಪಿನ ನಂದಿ- ಬಿರು ಬಿರುಸಿನ ಮತ್ತೆ ಮರಗಳು, ಕಾಡುಹಣ್ಣುಗಳನ್ನು ಎತ್ತಿ ಒಗೆದು ಕೊಕ್ಕಿನಲ್ಲಿ ಕ್ಯಾಕ್ ಮಾಡುತ್ತಿದ್ದ ಕೊಕ್ಕಾನಕ್ಕಿ (ಮಂಗಟ್ಟೆ)ಗಳು, ಚಂದದ ತೊಗಲಿನ ಕ್ಯಾಸಳಿಲು (ಮಲಬಾರ್ ಅಳಿಲು).. ಒಂದೊಂದು ಸ್ಪರ್ಶ, ಒಂದೊಂದು ಗಾನ, ಒಂದಿನಿತು ಮೌನ ಎಲ್ಲ ನನ್ನೊಳಗಿನ ಅಂತರ್ಮುಖಿ ಜೀವವನ್ನು ಬೆಚ್ಚಗೆ ತಬ್ಬಿಕೊಂಡ ಭಾವಗಳು, ನಾನು ಆಡದ ಮಾತುಗಳನ್ನು, ಹಾಡದ ಹಾಡನ್ನು ಒಂದು ಸೊಲ್ಲೂ ಬಿಡದೇ ಸಂಪೂರ್ಣ ಕೇಳಿಸಿಕೊಂಡವು ನನ್ನೂರ ಕಾಡು, ಮರ, ಕೆರೆ, ಕಲ್ಲುಗಳು. ಯಾವುದೋ ಒಂದು ಮರದ ಕೈಗೆಟಕುವ ಕೊಂಬೆ ಹತ್ತಿ ಕೂತು. ಕೈಲೊಂದು ಪುಸ್ತಕ ಹಿಡಿದು, ಚಿಲಿಪಿಲಿ ಹಕ್ಕಿಗಳ ಕೂಗು ಆಲಿಸುತ್ತಾ ಹಗಲುಗನಸಿನ ಲೋಕದಲ್ಲಿ ಕಳೆದುಹೋಗುತ್ತಿದ್ದ ಆ ಕ್ಷಣಗಳು ಆನಂದದ ತುರೀಯಾವಸ್ಥೆಯ ಕ್ಷಣಗಳೇ ಸೈ. ಅಂಥದ್ದೊಂದು ದಿವ್ಯಾನುಭೂತಿಯನ್ನು ದಿನದಿನ ದಯಪಾಲಿಸುತ್ತಿದ್ದ ಹನುಮಾಪುರದ ಪರಿಸರ, ಸುತ್ತಲಿನ ಕಾಡು ಹಾಗೂ ಅವುಗಳ ಜೊತೆಗಿದ್ದ ನನ್ನ ಒಡನಾಟದ ನೆನಪುಗಳ ಸಂಕಲನ ಇದು. - ರೇಖಾ ಹೆಗಡೆ ಬಾಳೇಸರ

Related Books