ಬಾಳಂತಿ ಪುರಾಣ

Author : ಶ್ರೀಕಲಾ ಡಿ.ಎಸ್

Pages 92

₹ 90.00




Year of Publication: 2019
Published by: ಬಹುರೂಪಿ ಪ್ರಕಾಶನ
Address: ನಂ.1 ನಾಕುತಂತಿ, ಬಸಪ್ಪ ಲೇಔಟ್, ಆರ್‌ಎಂವಿ ಎರಡನೇ ಹಂತ, ಸಂಜಯನಗರ, ಬೆಂಗಳೂರು-560094

Synopsys

ಐಟಿ- ಬಿಟಿಯ ಕಾಲದಲ್ಲಿದ್ದರೂ, ಕ್ಷಣಮಾತ್ರಕ್ಕೆ ಜಗತ್ತಿನ ಅನೇಕ ಸಂಗತಿಗಳನ್ನು ಎಳೆದುಕೊಂಡು ಅಂಗೈಯೊಳಗೆ ಕೂರಿಸಿಕೊಳ್ಳುವ ಅವಕಾಶವಿದ್ದರೂ ಹೆಣ್ಣಿನ ಲೋಕವನ್ನು ಮಾತ್ರ ಅರಿವಿನ ಪರಿಧಿಯಿಂದ ಆಚೆಯೇ ಕೂರಿಸಲಾಗಿದೆ. ಇಂತಹ ಹೆಣ್ಣಿನ ಲೋಕವನ್ನು ‘ಬಾಳಂತಿ ಪುರಾಣ’ದಲ್ಲಿ ತೆರೆದಿಡಲಾಗಿದೆ. ಈ ಕೃತಿ ಬಾಣಂತನದ ಅರಿವು ಮೂಡಿಸುತ್ತಾ, ಆ ಅವಧಿಯ ಸಮಸ್ಯೆಗಳನ್ನು ಹೇಳುತ್ತಾ, ಅದಕ್ಕೆ ಪರಿಹಾರವನ್ನೂ ಕೊಡುತ್ತಾ, ಮಗುವಿನ ಜೊತೆಗೆ ಬೆರೆಯುವ ಸಂತಸಕ್ಕೂ ಸಾಕ್ಷಿಯಾಗುತ್ತದೆ. ಬಾಳಂತಿಗೆ ಯಾಕೆ ಬಿಸಿನೀರು ಹಾಕಲಾಗುತ್ತದೆ, ಸೊಂಟಕ್ಕೆ ಕಟ್ಟುವ ಬೆಲ್ಟ್ ಹೇಗೆ ಸಹಾಯಕ, ಬಾಳಂತಿಗೆ ಕೊಡುವ ಔಷಧ-ಆಹಾರಗಳೇನು, ಶಿಶುವಿನ ಆರೈಕೆ ಹೇಗೆ, ಮೊಲೆ ಹಾಲು ಕೊಡುವಾಗ ಆಗುವ ಸಮಸ್ಯೆಗಳೇನು.. ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ವಿವರವಾದ ನಿರೂಪಣೆ ಇದೆ. ಬಾಳಂತಿ-ಶಿಶುವಿನ ಆರೈಕೆ ಎನ್ನುವುದು ಆಯಾ ವಾತಾವರಣಕ್ಕೆ ಅನುಗುಣವಾಗಿ ಭಿನ್ನವಾಗಿ ನಡೆದರೂ, ಆಗಷ್ಟೇ ಮಗುವನ್ನು ಹೆತ್ತ ಹಸಿ ಮೈಯ ಹೆಣ್ಣಿನ ಆಂತರಿಕ ತೊಳಲಾಟಗಳು, ಗೊಂದಲಗಳು ಹೆಚ್ಚೂ-ಕಡಿಮೆ ಒಂದೇ. ’ಬಾಳಂತಿ ಪುರಾಣ’ದಲ್ಲಿ ಇವೆಲ್ಲವನ್ನೂ ಯಾತನೆಯಾಗಿಸುತ್ತಾ ಹೇಳದೆ ಬಹಳ ಲವಲವಿಕೆಯಿಂದ, ಅನುಭವಗಳ ನೆಲೆಗಟ್ಟಿನಲ್ಲಿ ತುಂಟತನದ ಜೊತೆಗೇ ಹೇಳಲಾಗಿದೆ. ಬಾಣಂತನದ ಬಗ್ಗೆ ವೈದ್ಯರೇ ಪುಸ್ತಕವನ್ನು ಬರೆದದ್ದು ಬಿಟ್ಟರೆ, ಖುದ್ದು ಬಾಳಂತಿಯೇ ಸವಿಸ್ತಾರವಾಗಿ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ.

About the Author

ಶ್ರೀಕಲಾ ಡಿ.ಎಸ್

ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆರಂಭಿಸಿದ ಶ್ರೀಕಲಾ ಡಿ.ಎಸ್ ‘ದ ಸಂಡೆ ಇಂಡಿಯನ್’ ನ್ಯೂಸ್ ಮ್ಯಾಗಜೀನ್, ‘ಕನ್ನಡಪ್ರಭ’ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾದ ಇವರು ಹುಟ್ಟಿದ್ದು ೧೯೮೬ರಲ್ಲಿ. ಭರತನಾಟ್ಯ ಕಲಾವಿದೆಯೂ ಆಗಿರುವ ಶ್ರೀಕಲಾ ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿಯೂ ಕ್ರಿಯಾಶೀಲರಾಗಿದ್ದಾರೆ. ಧಾರಾವಾಹಿ ಸಂಭಾಷಣೆ ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಅವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಬಾಳಂತಿ ಪುರಾಣ’ ಅವರ ಚೊಚ್ಚಲ ಕೃತಿ.  ...

READ MORE

Related Books