ನಮ್ಮ ಮನೆಗೂ ಬಂದರು ಗಾಂಧೀಜಿ

Author : ರಾಜೇಶ್ವರಿ ತೇಜಸ್ವಿ

Pages 164

₹ 150.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ನಾಡನ್ನು ಬಹುವಾಗಿ ಪ್ರಭಾವಿಸಿದ, ಪ್ರಭಾವಿಸುತ್ತಲೇ ಇರುವ ಶಕ್ತಿ ಮಹಾತ್ಮ ಗಾಂಧಿ. ಸೃಜನಶೀಲ ಸಾಹಿತ್ಯವೂ ಗಾಂಧಿಯನ್ನು ಆಗಾಗ ನೆನೆಯುವುದಿದೆ. ನವೋದಯದಿಂದ ಬಂಡಾಯ ಸಾಹಿತ್ಯ ಚಳವಳಿಯವರೆಗೆ  ಅನೇಕ ಕವಿಗಳು, ಲೇಖಕರು ಗಾಂಧೀಜಿ ಅವರನ್ನು ಬಗೆಬಗೆಯಾಗಿ ನೆನೆದಿದ್ದಾರೆ.

ಆದರೆ ಕನ್ನಡ ಕಂಡ ಅದ್ಭುತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಮನೆಗೆ ಗಾಂಧಿ ಬಂದದ್ದು ಹೇಗೆ ಎಂಬ ಕುತೂಹಲ ತಣಿಸಿದ್ದಾರೆ ಲೇಖಕಿ ರಾಜೇಶ್ವರಿ ತೇಜಸ್ವಿ. ಅವರ ಮನೆಗೆ ಗಾಂಧಿ ಬರುವುದು ಚರಕದ ರೂಪದಲ್ಲಿ. 

ತೇಜಸ್ವಿ ಅವರನ್ನು ಗಾಂಧಿ ಪ್ರಭಾವಿಸಿದ ಬಗೆ, ಕುವೆಂಪು ಕುಟುಂಬದಲ್ಲಿ ಮಹಾತ್ಮ ಅರಳಿದ ಬಗೆಗೂ ಪುಸ್ತಕ ಸೊಗಸಾಗಿ ಮಾತನಾಡುತ್ತದೆ. ’ನನ್ನ ತೇಜಸ್ವಿ’ ಕೃತಿಯಲ್ಲಿ ಕಂಡ ರಾಜೇಶ್ವರಿ ಅವರ ಲವಲವಿಕೆಯ ಬರಹ ಇಲ್ಲಿಯೂ ಸೆಳೆಯುತ್ತದೆ. 

About the Author

ರಾಜೇಶ್ವರಿ ತೇಜಸ್ವಿ - 14 December 2021)

ರಾಜೇಶ್ವರಿ ತೇಜಸ್ವಿ- 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿದರು. ಆನಂತರ ಇವರ ಬದುಕಿನ ದಿಕ್ಕೇ ಬದಲಾಯಿಸಿತು. 1966ರಲ್ಲಿ  ವಿವಾಹವಾದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ. ಈಗ ಅದು ಐದನೇ ಮುದ್ರಣ ಕಂಡಿದೆ.  ಇವರ ಹವ್ಯಾಸವೂ ವಿಭಿನ್ನವಾಗಿದೆ. ಕ್ರೋಶ-ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ...

READ MORE

Related Books