ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

Author : ಕೋಟ ಲಕ್ಷ್ಮೀನಾರಾಯಣ ಕಾರಂತ

Pages 150

₹ 250.00

Synopsys

ಶಿವರಾಮ ಕಾರಂತರ ಅಣ್ಣ ಲಕ್ಷ್ಮೀನಾರಾಯಣ ಕಾರಂತರು ಕರ್ನಾಟಕದ ಅತ್ಯಂತ ವಿಶಿಷ್ಟ ವ್ಯಕ್ತಿಗಳಲ್ಲಿ ಒಬ್ಬರು. ಅವರೊಬ್ಬ ಶ್ರೇಷ್ಠ ಅಧ್ಯಾಪಕ; ಪ್ರಯೋಗಶೀಲ; ದೊಡ್ಡ ಮಾನವತಾವಾದಿ, ಪ್ರಚಾರ ಪ್ರಿಯರಲ್ಲದ ಕರ್ಮಯೋಗಿಯ ಹೆಸರು ಬಹಳ ಜನರಿಗೆ ಗೊತ್ತಿಲ್ಲದಿರುವುದು ಅಂಥ ಅಚ್ಚರಿಯ ಸಂಗತಿಯೂ ಅಲ್ಲ. ಎಂಬತ್ತೇಳು ವರುಷಗಳ ಈ ಹಿರಿಯರ ಬದುಕಿನ ಸ್ಮರಣೆಗಳು ’ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಸಾಗರದ ಅಕ್ಷರ ಪ್ರಕಾಶನ ಹೊರ ತಂದಿರುವ ಪುಸ್ತಕ ಒಂದು ಹಿರಿಯ ಜೀವದ ಕ್ರಿಯಾಶೀಲ ಬದುಕಿನ ಉತ್ಕೃಷ್ಟ ದಾಖಲೆ.

Related Books