ಪಾಪಿಗಳ ಲೋಕದಲ್ಲಿ

Author : ರವಿ ಬೆಳಗೆರೆ

Pages 392

₹ 210.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಕನ್ನಡದಲ್ಲಿ ಭೂಗತ ಜಗತ್ತಿನ ಒಳ ಹೊರ ಹರಿವುಗಳ ಬಗ್ಗೆ ಬರೆದಂತಹ ಕೃತಿಗಳು ವಿರಳ. ಬೆಂಗಳೂರಿನ ಭೂಗತ ಜಗತ್ತಿನ ಕುರಿತು ಅಲ್ಲಿನ ಸತ್ಯಾ ಸತ್ಯತೆಗಳ ಕುರಿತು ಬರೆದಂತಹ ಪುಸ್ತಕ ಪಾಪಿಗಳ ಲೋಕದಲ್ಲಿ. ಸಣ್ಣ ಪುಟ್ಟ ಗುಂಪು ಕಟ್ಟಿಕೊಂಡು ಬೆಂಗಳೂರಿನಲ್ಲಿ ಹಾವಳಿ ಎಬ್ಬಿಸಿದ ರೌಡಿಗಳಿಂದ ಹಿಡಿದು ವ್ಯವಸ್ಥಿತವಾದ ಕೋಟೆಯನ್ನು ಕಟ್ಟಿಕೊಂಡು ಕುಳಿತಲ್ಲಿಂದಲೇ ಯಾವುದೇ ಕೆಲಸವನ್ನು ಮಾಡಬಲ್ಲ ಡಾನ್‍ಗಳವರೆಗೂ ಎಲ್ಲರ ಜಾತಕವನ್ನು ತೆರೆದಿಡುವಂತಹ ಪುಸ್ತಕವಿದು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಹಲವು ಸರಣಿಗಳಲ್ಲಿ ಪ್ರಕಟಗೊಂಡ ಲೇಖನ, ಸಂದರ್ಶನಗಳನ್ನು ಒಂದೇ ಕಡೆ ಸೇರಿಸಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಮೊದಲ ಕೆಲವು ಸರಣಿಗಳು ಪ್ರಕಟಗೊಂಡಾಗ ಭೂಗತ ಲೋಕದ ರೌಡಿಗಳನ್ನು ಹೀರೊಗಳಂತೆ ಬಿಂಬಿಸಲಾಗುತ್ತಿದೆ ಎಂಬ ಅಪವಾದ ಕೇಳಿ ಬಂದರೂ ಬಹಳಷ್ಟು ಜನರನ್ನು ತನ್ನತ್ತ ಸೆಳೆದಂತಹ ಸರಣಿ ಇದು. ಶಿವಾಜಿ ನಗರದ ಕೋಳಿ ಫಯಾಜ್‍಼ನಿಂದ ಹಿಡಿದು ಮಂಗಳೂರಿನಿಂದ ಬೆಂಗಳೂರಿಗೆ ಬಂದು ಭೂಗತ ಲೋಕವನ್ನು ಆಳಿದ ಮುತ್ತಪ್ಪ ರೈ ವರೆಗೂ ನಡೆದ ಮಹತ್ತರವಾದ ಘಟನೆಗಳ ವಿವರಗಳು ಈ ಕೃತಿಯಲ್ಲಿವೆ. ಒಂದೇ ಬಾರಿಗೆ ಓದಿ ಮುಗಿಸಲು ಕಷ್ಟವಾದರೂ ರೋಚಕ ಘಟನೆಗಳ ನಿರೂಪಣೆ ಓದುಗರನ್ನು ಸೆಳೆಯುವಲ್ಲಿ ಈ ಪುಸ್ತಕ ಸಫಲವಾಗಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books