ಮಂಜಿನೆಡೆಯ ಚಿತ್ರಗಳು

Author : ಪರಂಜ್ಯೋತಿ (ಕೆ.ಪಿ. ಸ್ವಾಮಿ)

Pages 232

₹ 150.00




Year of Publication: 2011
Published by: ಇಂಚರ ಪ್ರಕಾಶನ
Address: ಬೆಂಗಳೂರು
Phone: 831804715

Synopsys

‘ಮಂಜಿನೆಡೆಯ ಚಿತ್ರಗಳು’ ಕೃತಿಯು ಪರಂಜ್ಯೋತಿಯವರ ಅನುಭವ ಕಥನವಾಗಿದೆ. ನೀಲಗಿರಿ ಜಿಲ್ಲೆಯ ಬೆಟ್ಟ-ಕಾಡುಗಳು, ಪ್ರಕೃತಿಯ ಸೌಂದರ್ಯ ಪ್ರವಾಸಿಗರಿಗೆ ಬಲು ರಮ್ಯ - ಮನಮೋಹಕ. ಹಾಗೇ ಅಲ್ಲಿನ ಟೀ-ಎಸ್ಟೇಟುಗಳು ಅವುಗಳ ಮಾಲೀಕರಿಗೆ ಹಣಗಳಿಸುವ ಸಾಧನಗಳು. ಎಲ್ಲವೂ ನಿಜ ಇಲ್ಲಿ; ಇನ್ನೊಂದು ಬಡ ಕೂಲಿ ಕಾರ್ಮಿಕರ ಬವಣೆಯ ಮುಖವಿದೆ. ಅದು ಎಸ್ಟೇಟುಗಳಲ್ಲಿ ದುಡಿದು ಸಿಕ್ಕ ಕೂಲಿಯಲ್ಲಿ ಸಂಸಾರ ನಡೆಸಲಾಗದೆ ಸಾಲಸೋಲ ಮಾಡಿ ತೀರಿಸಲಾಗದೆ ಬದುಕಿಗಾಗಿ ಹರಸಾಹಸ ಪಡುತ್ತ ದಿನಗಳನ್ನು ದೂಡುವ ಅಸಹಾಯಕ ಮುಖವನ್ನು ಕಾಣಬಹುದು. ಇಲ್ಲಿ ವರ್ಣಿಸಲ್ಪಟ್ಟ ರೋಚಕ ಬದುಕು ಇಂದಿನ ಮಕ್ಕಳಿಗಾಗಲಿ ನಾಳೆಯ ಬದುಕಿನಲ್ಲಾಗಲೀ ಕಾಣಲು ಸಾಧ್ಯವಿಲ್ಲ.

About the Author

ಪರಂಜ್ಯೋತಿ (ಕೆ.ಪಿ. ಸ್ವಾಮಿ)
(10 June 1936 - 04 July 2019)

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.  ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...

READ MORE

Reviews

(ಹೊಸತು, ಏಪ್ರಿಲ್ 2012, ಪುಸ್ತಕದ ಪರಿಚಯ)

ಇವು ನೆನಪಿನಾಳದಿಂದ ಬಗೆದು ತಂದ ಸುಮಾರು ಅರವತೈದು ವರ್ಷಗಳಷ್ಟು ಸುದೀರ್ಘವಾದ ಜೀವನಾನುಭವದ ರೋಚಕ ಅನುಭವಗಳು, ಇಲ್ಲಿನ ನೀಲಗಿರಿ ಬೆಟ್ಟ - ಕಾಡು ಪ್ರದೇಶದ ಟೀ ಎಸ್ಟೇಟಿನಲ್ಲಿ ಕಳೆದ ತಮ್ಮ ಬಾಲ್ಯ, ಮುಂದೆ ತಮ್ಮ ವೃತ್ತಿಜೀವನದ ನಗರಗಳಲ್ಲಿನ ಜೀವನದರ್ಶನ ಇವೆಲ್ಲವನ್ನು ಪರಂಜ್ಯೋತಿಯವರು ನಮ್ಮ ಮನಸ್ಸಿನಾಳಕ್ಕೆ ಇಳಿಯುವಂತೆ ವರ್ಣಿಸಿದ್ದಾರೆ. ನೀಲಗಿರಿ ಜಿಲ್ಲೆಯ ಬೆಟ್ಟ-ಕಾಡುಗಳು, ಪ್ರಕೃತಿಯ ಸೌಂದರ್ಯ ಪ್ರವಾಸಿಗರಿಗೆ ಬಲು ರಮ್ಯ - ಮನಮೋಹಕ. ಹಾಗೇ ಅಲ್ಲಿನ ಟೀ-ಎಸ್ಟೇಟುಗಳು ಅವುಗಳ ಮಾಲೀಕರಿಗೆ ಹಣ ಗಳಿಸುವ ಸಾಧನಗಳು, ಎಲ್ಲವೂ ನಿಜ ಇಲ್ಲಿ ಇನ್ನೊಂದು ಬಡ ಕೂಲಿ ಕಾರ್ಮಿಕರ ಬವಣೆಯ ಮುಖವಿದೆ. ಅದು ಎಸ್ಟೇಟುಗಳಲ್ಲಿ ದುಡಿದು ಸಿಕ್ಕ ಕೂಲಿಯಲ್ಲಿ ಸಂಸಾರ ನಡೆಸಲಾಗದೆ ಸಾಲಸೋಲ ಮಾಡಿ ತೀರಿಸಲಾಗದೆ ಬದುಕಿಗಾಗಿ ಹರಸಾಹಸ ಪಡುತ್ತ ದಿನಗಳನ್ನು ದೂಡುವ ಅಸಹಾಯಕ ಮುಖ. ಇಲ್ಲಿ ವರ್ಣಿಸಲ್ಪಟ್ಟ ರೋಚಕ ಬದುಕು ಇಂದಿನ ಮಕ್ಕಳಿಗಾಗಲಿ ನಾಳೆಯ ಬದುಕಿನಲ್ಲಾಗಲೀ ಕಾಣಲು ಸಾಧ್ಯವಿಲ್ಲ. ಇಂದಿನದು ಯಾಂತ್ರಿಕ ಯುಗ. ಎಲ್ಲೆಲ್ಲೂ ಸುಖವನ್ನರಸುತ್ತ ಶ್ರಮಜೀವನಕ್ಕೆ ಬೆನ್ನು ತಿರುಗಿಸಿದ ದಿನಗಳಿವು. ಇಲ್ಲಿನ ಸಾಹಸಮಯ ಬದುಕಿನೊಂದಿಗೆ ಹೋರಾಡಿದ ವಿವಿಧ ಮುಖದ ಜನರನ್ನು ನಾವು ಮೆಚ್ಚಲೇ ಬೇಕಾಗುತ್ತದೆ. ಇವೆಲ್ಲ ಕಥೆಗಳಲ್ಲ; ಬದುಕಿನ ಭಾಗಗಳೆಂಬುದನ್ನು ಒಪ್ಪಲೇ ಬೇಕಾಗುತ್ತದೆ. ತಾವು ವಾಸ ಮಾಡಿದಲ್ಲೆಲ್ಲ ಮೂಡಿಸಿದ ತಮ್ಮ ಹೆಜ್ಜೆ ಗುರುತುಗಳನ್ನು ಒಂದೊಂದಾಗಿ ಲೆಕ್ಕಹಾಕುತ್ತಾ ಬದುಕೆಂಬುದು ಎಲ್ಲಿಂದ ಎಲ್ಲಿಗೆ ಸಾಗುತ್ತದೆ ಎಂಬ ವಿಸ್ಮಯವನ್ನು ಲೇಖಕರು ಮನಗಾಣಿಸುತ್ತಾರೆ.

 

Related Books