ವಕೀಲರೊಬ್ಬರ ವಗೈರೆಗಳು

Author : ಸಿ.ಎಚ್. ಹನುಮಂತರಾಯ

Pages 655

₹ 550.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009

Synopsys

ಕರ್ನಾಟಕ ರಾಜ್ಯದ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರ ಕೃತಿ-ವಕೀಲರೊಬ್ಬರ ವಗೈರೆಗಳು. ವಕೀಲಿ ವೃತ್ತಿಯಲ್ಲಿ ಕಂಡುಂಡ ತಮ್ಮ ಅನುಭವಗಳನ್ನು, ಆ ಮೂಲಕ ಕಂಡ ಸೂಕ್ಷ್ಮ ಒಳನೋಟಗಳನ್ನು ದಾಖಲಿಸಿದ ಅನುಭವ ಕಥನವಿದು. ರೈತಪರ, ಕನ್ನಡ ಪರ ಹೋರಾಟಗಾರರ ಮೇಲೆ ಸರ್ಕಾರ ಹಾಕಿರುವ ಪ್ರಕರಣಗಳನ್ನು ಆದ್ಯತೆ ಮೇರೆಗೆ ಸ್ವಯಂ ಆಸಕ್ತಿಯಿಂದ ತೆಗೆದುಕೊಂಡು ಅವರಿಗೆ ನ್ಯಾಯ ದೊರಕಿಸುವಲ್ಲಿ ಇವರ ಸೇವೆಯು ಗಮನಾರ್ಹ. ಸಾಮಾಜಿಕ ಕಳಕಳಿಯ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದ ಹಿರಿಯ ವಕೀಲರ ಅನುಭವಗಳು ಕಿರಿಯ ವಕೀಲರಿಗೆ ಮಾತ್ರವಲ್ಲ; ಯಾವುದೇ ವೃತ್ತಿಯಲ್ಲಿರಲಿ, ಪ್ರತಿಯೊಬ್ಬರು ಸಲ್ಲಿಸಿಬೇಕಾದ ಸಾಮಾಜಿಕ ಹೊಣೆಗಾರಿಯನ್ನು ಎಚ್ಚರಿಸುವ ನಿಟ್ಟಿನಲ್ಲಿ ಅನುಭವಗಳು ದಾಖಲಾಗಿದ್ದನ್ನು ಈ ಕೃತಿ ತೋರುತ್ತದೆ.

About the Author

ಸಿ.ಎಚ್. ಹನುಮಂತರಾಯ

ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದವರು. ಬಿ.ಎ(ಆನರ್ಸ್) ಹಾಗೂ ಎಲ್.ಎಲ್.ಬಿ. ಪದವೀಧರರು. ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಹ-ಪ್ರಾಧ್ಯಾಪಕರಾಗಿದ್ದೂ, ಪ್ರಸಿದ್ಧ ವಕೀಲರು. ಹಲವಾರು ಕಾನೂನು ಕಾಲೇಜುಗಳಲ್ಲಿ ಗೌರವ ಉಪನ್ಯಾಸಕರಾಗಿದ್ದರು. ರೈತಪರ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಹಾಕಿದ ಪ್ರಕರಣಗಳಲ್ಲಿ ಅವರ ಪರ ವಕಾಲತ್ತು ವಹಿಸಿದ್ದರು. ಕೋರ್ಟಿನಲ್ಲಿ ಕನ್ನಡದಲ್ಲೇ ವಾದ ಮಂಡಿಸುವ ಕೌಶಲ್ಯವುಳ್ಳವರು.   ಕೃತಿಗಳು: ವಕೀಲರೊಬ್ಬರ ವಗೈರೆಗಳು ಪ್ರಶಸ್ತಿ-ಪುರಸ್ಕಾರಗಳು: ವಕೀಲರೊಬ್ಬರ ವಗೈರೆಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ...

READ MORE

Related Books