ಕಾಟಿಹಳ್ಳದ ತಿರುವು

Author : ಶ್ರೀಧರ ಪತ್ತಾರ

Pages 124

₹ 120.00




Year of Publication: 2023
Published by: ಹೊಂಗಿರಣ ಪ್ರಕಾಶನ
Address: ಹಿರೇಮಸಳಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ- 8722179680

Synopsys

‘ಕಾಟಿಹಳ್ಳದ ತಿರುವು’ ಶ್ರೀಧರ ಪತ್ತಾರ ಅವರು ಬರೆದಿರುವ ಫಾರೆಸ್ಟರ್ ನೊಬ್ಬನ ಅನುಭವ ಕಥನ. ಪುಸ್ತಕದ ಕುರಿತು ಬರೆದಿರುವ ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಪ್ರಶಾಂತ್ ಪಿ.ಕೆ.ಎಮ್ ಅವರು ಮಾತನಾಡಿದ ಗಿಡ-ಮರ ಮತ್ತು ವನ್ಯಜೀವಿಗಳ ಜೊತೆಗಿನ ಸಂಬಂಧದೊಂದಿಗೆ ಅರಣ್ಯ ಇಲಾಖೆಯ ಕರ್ತವ್ಯದಲ್ಲಿ ದಕ್ಕಿದ ಅನುಭವಗಳನ್ನು ಶ್ರೀಧರ ಪತ್ತಾರರವರು ಮನಮುಟ್ಟುವಂತೆ ಬರೆದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತಸದ ಸಂಗತಿ. ಇವರಿಂದ ಕಾಡಿನ ಕುರಿತು ಇನ್ನಷ್ಟೂ ಲೇಖನಗಳು ಹೊರಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಹಾಗೇ ಕೃತಿಯ ಕುರಿತು ಬರೆದಿರುವ ಡಾ.ರಾಜಶೇಖರ್ ಬಡಿಗೇರ ಅವರು ಇಲ್ಲಿನ ಲೇಖನಗಳು ಸರಳವಾಗಿಯೂ, ಕುತೂಹಲಕಾರಿ ದೃಷ್ಟಾಂತಗಳಿಂದ ನಿರೂಪಿತವಾಗಿವೆ. ಎಲ್ಲರಿಗೂ ಅನುಭವವೇದ್ಯವಲ್ಲದ ಒಂದು ಬಗೆಯ ವಿಶಿಷ್ಟ ಲೋಕವನ್ನು ನಮ್ಮೆದುರಿಗೆ ಬಿಚ್ಚಿಡುತ್ತವೆ. ಶ್ರೀಧರ ಪತ್ತಾರರವರು ಕಾಡಿನ ಅನುಭವಗಳನ್ನು ಕಥೆಗಳಾಗಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಡುತ್ತಿರುವುದು ಸಾಹಸವೇ ಸರಿ. ಮತ್ತು ಮೆಚ್ಚುಗೆಯ ವಿಷಯವೂ, ಇವರಿಂದ ಇಂತಹ ಇನ್ನಷ್ಟೂ ಕಾಡಿನ ಕಥನಗಳು ಹೊರಬರಲಿ, ಈ ಮೂಲಕ ಇವರು ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.

About the Author

ಶ್ರೀಧರ ಪತ್ತಾರ
(06 December 2023)

ಶ್ರೀಧರ ಪತ್ತಾರ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದವರು. ಬೆಳೆದದ್ದು ಹಿರೇಮಸಳಿಯಲ್ಲಿ. 1988 ರಲ್ಲಿ ಜನನ. 'ಜೀವಪ್ರೀತಿ' ಇವರ ಮೊದಲ ಕವನ ಸಂಕಲನ. ಈ ಕೃತಿ 2016ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತ ತಗೊಂಡಿದೆ. ಇವರ ಕವಿತೆಗಳು ಮತ್ತು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕಾಡಿನ ಕುರಿತಾದ ಕಥನಗಳು ಪ್ರತಿಷ್ಠಿತ 'ಫಾರೆಸ್ಟ್ ರಿಪೋರ್ಟರ್' ಮ್ಯಾಗಜಿನ್‌ಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರ ವಲಯದ ಮಮದಾಪುರ ಗಸ್ತಿನಲ್ಲಿ 'ಬೀಟ್ ಫಾರೆಸ್ಟರ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಸೇವಾವಧಿಯಲ್ಲಿ ದಕ್ಕಿದ ಅನುಭವಗಳನ್ನು ಈಗ ಕಥನವಾಗಿಸಿದ್ದಾರೆ. ...

READ MORE

Related Books