ಕ್ಲಾಸ್ ಟೀಚರ್

Author : ಕಲೀಮ್ ಉಲ್ಲಾ

Pages 280

₹ 250.00




Year of Publication: 2016
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಲೇಖಕರಾದ ಕಲೀಮ್ ಉಲ್ಲಾ ಅವರು ಬರೆದಿರುವ ಕೃತಿ ’ಕ್ಲಾಸ್ ಟೀಚರ್‍’.

ಲೇಖಕರು ತಮ್ಮ ಅನುಭವ ಕಥನಗಳ ಮೂಲಕ ಬರೆದಿರುವ ಇಲ್ಲಿನ ಅನೇಕ ಲೇಖನಗಳು ಹಾಸ್ಯದಿಂದಲೂ, ಶಿಕ್ಷಣ ಕ್ಷೇತ್ರದ ಒಳ ಹೊರಗನ್ನು ತಿಳಿಸುವುದರಿಂದಲೂ  , ಬದುಕಿನ ನಂಬಿಕೆ, ಪರಿಸರ ವಲಯ, ಕಲಿಕೆ, ಒಡನಾಟ ಇವೆಲ್ಲವೂ ಸಹಜವಾಗಿ ಅವರ ಬರಹಗಳಲ್ಲಿ ಕಾಣುವಂತದ್ದು.

ಅಡ್ಡ ಹೆಸರುಗಳೆಂಬ ಗುರು ವಾತ್ಸಲ್ಯ, ಗೋವಾ ಟೂರ್‍ ಫಜೀತಿ, ದೀಪವೂ ನಿನ್ನದೆ, ಅಪ್ಪನ ಪ್ರೀತಿ, ಅವನಿಗೆ ಟೇಸ್ಟೇ ಇಲ್ಲ, ಪ್ರೇಮಿಗಳ ರನ್ನಿಂಗ್ ರೇಸ್, ಹೆಣವಾದವಳು ಮತ್ತೆ ಬಂದಳು, ಫೇಲಾಗುವವರೆಲ್ಲ ದಡ್ಡರೇ?, ನನ್ನ ಮೊಮ್ಮಗ ಬರ್‍ತಾನೆ, ಅಮೆರಿಕ ಉಪ್ಪಿಟ್ಟು, ಪ್ಲೀಸ್ ಫ್ರೆಂಡ್ಸ್ ನನ್ನ ಕಳಿಸಬೇಡಿ, ಜುಗ್ಗಿ ಮಹೇಶ, ನೀನೆಷ್ಟು ಕೊಡ್ತೀಯಾ?, ನಮ್ಮ ಮೊದಲಿಯಾರ್‍ ಮಾಸ್ಟ್ರು, ಅಪ್ಪ ಸತ್ತೋದ್ರು, ಟೆಂಟ್ ಟಾಕೀಸ್, ಸೂಸೂ ಪುರಾಣ, ಆ ಮಣ್ಣಲ್ಲೇ ಅನ್ನವಿತ್ತು, ಅಮ್ಮಾ ನನ್ನನ್ನು ಉಳಿಸಿಕೋ, ಛಾಲೆಂಜ್ ಬಸಿಯಾ, ಮೇಷ್ಟ್ರರ ಚಾಕರಿ, ಬರುತ್ತಾಳೆಂದು ಕಾಯುತ್ತಿದ್ದಾನೆ ಇನ್ನೂ ಅನೇಕ ಲೇಖನಗಳನ್ನು ಈ ಕೃತಿ ಒಳಗೊಂಡಿದೆ

About the Author

ಕಲೀಮ್ ಉಲ್ಲಾ

ಕತೆಗಾರ, ಲೇಖಕ ಕಲೀಮ್ ಉಲ್ಲಾ ಅವರು ಚಿಕ್ಕಮಗಳೂರಿನ ಜಿಲ್ಲೆಯ ತರೀಕೆರೆಯವರು. ಪ್ರಸ್ತುತ ಶಿವಮೊಗ್ಗೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ತೇಜಸ್ವಿ ಬರಹಗಳಿಂದ ಪ್ರಭಾವಿತರು. ಉತ್ತಮ ಛಾಯಾಗ್ರಾಹಕರು. ಚೊಚ್ಚಲ ಕೃತಿ ‘ಕ್ಲಾಸ್ ಟೀಚರ್’. ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ ಇದು; ಅವರ ಅನುಭವ ಕಥನವೂ ಹೌದು. ...

READ MORE

Related Books