ಹೆಡ್ಡಿಂಗ್ ಕೊಡಿ

Author : ಮಂಜುಳಾ ಹುಲಿಕುಂಟೆ

Pages 168

₹ 30.00




Year of Publication: 2016
Published by: ಸಂವಾದ
Address: ಸಂವಾದ # 7, 2ನೇ ಕ್ರಾಸ್ ಡಯಾಗನಲ್ ರಸ್ತೆ, ಸಿಟಿ ಸೆಂಟರ್‍ ಲೈಬ್ರರಿ ಹಿಂಬಾಗ, ಜಯನಗರ 3ನೇ ಹಂತ, ಬೆಂಗಳೂರು-560011
Phone: 560011

Synopsys

ಹೆಡ್ಡಿಂಗ್ ಕೊಡಿ’ ಪುಸ್ತಕದ ಲೇಖಕಿ ಮಂಜುಳಾ ಹುಲಿಕುಂಟೆ. ಕಳೆದ ೨೫ ವರ್ಷಗಳಿಂದ ಯುವಜನರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂವಾದ ಎಂಬ ಸಂಸ್ಥೆ ಪುಸ್ತಕದ ರಚನೆಗೆ ಕಾರಣವಾಗಿದೆ. ಇಪ್ಪತೈದು ವರ್ಷಗಳಿಂದ ಯುವಜನರ ಸಮಸ್ಯೆಗೆ ಕಿವಿಯಾಗಿ, ಅರಿವಿನೊಂದಿಗೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕರಿಸುತ್ತಿರುವ ಸಂವಾದ ಸಂಸ್ಥೆ, ತನ್ನ ಕಾರ್ಯಚಟುವಟಿಕೆ ಭಾಗವಾಗಿ ಈ ಡ್ಯಾಕ್ಯುಮೆಂಟರಿ ಹೊರತರಲು ನಿರ್ಧರಿಸಿತ್ತು. ಇದೇ ಸಂಸ್ಥೆಯಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಹುಲಿಕುಂಟೆ ಅವರಿಗೆ ಈ ಕೃತಿ ರಚನೆಯ ಜವಾಬ್ದಾರಿ ವಹಿಸಲಾಗಿತ್ತು. ಇದೊಂದು ಭಿನ್ನವಾದ ಕೃತಿ. ಇಲ್ಲಿ ಸುಮಾರು ೧೮ ಯುವಜನರ ಕಥೆಗಳಿದ್ದು ಈ ಕಥೆಗಳು ಸಮಾಜ ಯುವಸಮುದಾಯವನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸುವಷ್ಟು ಗಾಢವಾಗಿವೆ. ಯುವತಲೆಮಾರಿನ ಬಗ್ಗೆ ಹಗುರವಾಗಿ ಮಾತನಾಡುವವರನ್ನು ನಿತ್ಯ ನೋಡುತ್ತವೆ ಇದ್ದರೂ ಅವರ ಸಮಸ್ಯೆಗಳು, ತಲ್ಲಣಗಳು ನಿರೀಕ್ಷೆಗಳು ಏನೆಂಬುದನ್ನು ಚಿಂತಿಸುವುದು ತೀರಾ ಕಡಿಮೆ. ಆದರೆ ಭಾರತದಲ್ಲಿ ಸುಮಾರು ಶೇ 60ರಷ್ಟು ಮಕ್ಕಳಿಗೆ ತಮ್ಮ ತಾರುಣ್ಯವನ್ನು, ಯೌವನವನ್ನು ಆರೋಗ್ಯಪೂರ್ಣವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಶೇ. 50ರಷ್ಟು ಮಕ್ಕಳಿಗೆ ಸುಂದರವಾದ ಬಾಲ್ಯವೇ ಇರುವುದಿಲ್ಲ. ಬಡತನದ ಕಾರಣಕ್ಕೋ, ಜಾತಿ, ಧರ್ಮದ ಕಾರಣಕ್ಕೋ, ಲಿಂಗತಾರತಮ್ಯದ ಕಾರಣದಿಂದಲೋ ಬಾಲ್ಯ, ಯೌವನವನ್ನು ಕಳೆದುಕೊಂಡು ತಮ್ಮದಲ್ಲದ ಜವಾಬ್ದಾರಿಗಳನ್ನು ಹೊತ್ತುಕೊಂಡು ನರಳುತ್ತಾರೆ. ಇಂತಹುದೇ ಯುವಜನರೊಂದಿಗೆ ಮಾತಿಗಿಳಿಯುವ, ಅವರ ಜೀವನಕ್ರಮವನ್ನು ಜೊತೆಯಿದ್ದು ಗಮನಿಸುವ ಲೇಖಕಿ ಅವರ ನೋವುಗಳಿಗೆ ರೂಪನೀಡುತ್ತಾರೆ. ಅವರ ಕಥೆಗಳನ್ನು ಕೇಳಿ ಅವುಗಳನ್ನು ಅವರದೇ ಶೈಲಿಯಲ್ಲಿ ಕಥೆಯಾಗಿಸಿ ಸಮಾಜದ ಎದುರಿಟ್ಟಿದ್ದಾರೆ. ಯುವ ಜನರೊಂದಿಗೆ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳಿಗೆ ಈ ಪುಸ್ತಕ ತಲುಪಿದ್ದು ಸರ್ಕಾರದ ಎದುರು ಯುವತಲೆಮಾರಿನ ತಲ್ಲಣಗಳನ್ನಿಟ್ಟು ಪ್ರಶ್ನಿಸುವಲ್ಲಿ ಪುಸ್ತಕ ಸಹಕಾರಿಯಾಗಿದೆ.

About the Author

ಮಂಜುಳಾ ಹುಲಿಕುಂಟೆ
(17 December 1992)

ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.   ಸಂವಾದ ಸಂಸ್ಥೆಯಲ್ಲಿ ‘ಯುವಜನರ ...

READ MORE

Related Books