ಅಕ್ಟಾವಿಯೋ ಪಾಜ್ ಕವಿತೆಗಳು

Author : ಶೋಭಾ ನಾಯಕ

Pages 62

₹ 50.00




Year of Publication: 2012
Published by: ಸುಂದರ ಪುಸ್ತಕ ಪ್ರಕಾಶನ
Address: # 79, `ಚಂದ್ರ ಕಿರಣ’, 2ನೇ ಮುಖ್ಯ ರಸ್ತೆ, ಶಕ್ತಿ ನಗರ, ಧಾರವಾಡ - 580 004
Phone: 9448556458

Synopsys

ಲೇಖಕಿ ಶೋಭಾ ನಾಯಕ ಅವರ ಅನುವಾದಿತ ಕವನ ಸಂಕಲನ ‘ಅಕ್ಟಾವಿಯೋ ಪಾಜ್ ಕವಿತೆಗಳು’. ಅಕ್ಟಾವಿಯೋ ಪಾಜ್  -ಈತ ಮೆಕ್ಸಿಕೋ ದೇಶದ ಕವಿ. 1990 ರಲ್ಲಿ ಈತನ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. 

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬಿ.ಎ.ಸನದಿ ಅವರು ‘ಈ ಸಂಕಲನದಲ್ಲಿಯ ಸಂವಾದ, ಹೀಗೆ ಈ ಜಗತ್ತು, ಭಾಸ, ನೀರವ ಅಶಾಂತ, ಚಂದ್ರನ ತುಂಡು, ಉತ್ಸವ ಭೂಮಿ,ಕವಿ - ಇತ್ಯಾದಿ ಕವನಗಳನ್ನು ಮತ್ತೆ ಮತ್ತೆ ಓದಿ ಚಿಂತನೆ ಮಾಡಬೇಕೆನಿಸುತ್ತದೆ. ಈ ಕಾವ್ಯ ಶರೀರದಾಚೆಯ ಭಾವ ಸೌಂದರ್ಯ ಹಾಗೂ ಅರ್ಥ ಗಾಂಭೀರ್ಯ ಅಪರೂಪದ್ದು- ಅನನ್ಯವಾದದ್ದು.’ ಎಂದು ಪ್ರಶಂಸಿದ್ದಾರೆ.

 

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books