ಮುಂದಡಿ

Author : ಸ. ರಘುನಾಥ

Pages 120

₹ 80.00




Published by: ದ್ರಾವಿಡ ವಿಶ್ವವಿದ್ಯಾಲಯ
Address: ಶ್ರೀನಿವಾಸವನಂ, ಕುಪ್ಪಂ, 517426

Synopsys

’ಮುಂದಡಿ’ ತೆಲುಗಿನ ಪ್ರಖ್ಯಾತ ಕವಿ ಅಡಿಗೋಪುಲ ವೆಂಕಟರತ್ನಂ ಅವರ ಕವಿತೆಗಳ ಕನ್ನಡ ಅನುವಾದ. ಸರಳ, ಸುಂದರ ಮತ್ತು ಅರ್ಥವತ್ತಾದ ಕವಿತ್ವದ ಮೂಲಕ ತೆಲುಗು ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದವರು ಅಡಿಗೋಪುಲ, ಗಾಢವಾದ ಭಾವಾಭಿವ್ಯಕ್ತಿಯೊಂದಿಗೆ ಯಾವುದೇ ಆಡಂಬರವಿಲ್ಲದೆ, ಬದ್ಧತೆಯಿಂದ ಕಾವ್ಯ ಕಟ್ಟುತ್ತಿರುವ ಸಮಕಾಲೀನ ತೆಲುಗು ಕವಿಗಳಲ್ಲಿ ಇವರದು ಮುಂಚೂಣಿಯಲ್ಲಿರುವ ಹೆಸರು. ವೃತ್ತಿಯೆಡೆಗಿನ ಪ್ರಾಮಾಣಿಕತೆ, ಪ್ರವೃತ್ತಿಯೆಡೆಗಿನ ಅಭಿರುಚಿ, ಬದುಕಿನಡೆಗಿನ ಪ್ರೀತಿ ಇವರ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books