‘ಲೂಯಿಸ್ ಗ್ಲಿಕ್ ಕವಿತೆಗಳು’ 2020ನೇ ಸಾಲಿನ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಕವಯತ್ರಿ ಲೂಯಿಸ್ ಗ್ಲಿಕ್ ಅವರ ಕವಿತೆಗಳ ಕನ್ನಡಾನುವಾದ. ಅನುವಾದಕಿ ತೇಜಶ್ರೀ ಜ.ನಾ ಅವರು ಲೂಯಿಸ್ ಗ್ಲಿಕ್ ಅವರ ಪ್ರಸಿದ್ಧ ಕವಿತೆಗಳನ್ನು ಕನ್ನಡೀಕರಿಸಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ಮೂಲದ ಹಾಗೂ ಮ್ಯಾಸೆಚುಟೆಸ್ ನಿವಾಸಿ ಲೂಯಿಸ್ ಗ್ಲೀಕ್, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದರು ಅವರ ಸಾಹಿತ್ಯದ ಜೀವಾಳ ಇರುವುದು ಅವರ ಕವಿತೆಗಳಲ್ಲಿ. ಕವಿತೆಗಳನ್ನು ಗಾಢವಾಗಿ ಪ್ರೀತಿಸುವ ಮತ್ತು ಅವುಗಳನ್ನೇ ಸಾಹಿತ್ಯ ಬದುಕಿನ ಉಸಿರಾಗಿಸಿಕೊಂಡಿರುವ ಲೂಯಿಸ್ ಅವರ ಕವಿತೆಗಳು ಮನುಷ್ಯ ಪ್ರೀತಿಗೆ ತುಡಿಯುವ ಆಳದ ಭಾವಗಳನ್ನು ಒಳಗೊಂಡಿರುತ್ತವೆ. ಅಂತಹ ಮಹತ್ವದ ಕವಯತ್ರಿಯ ಕವಿತೆಗಳನ್ನು ಕನ್ನಡ ಕಾವ್ಯಲೋಕಕ್ಕೆ ಪರಿಚಯಿಸಿದ್ದಾರೆ ಲೇಖಕಿ ಜ.ನಾ. ತೇಜಶ್ರೀ.
©2021 Bookbrahma.com, All Rights Reserved