ನನ್ನ ಕಣ್ಣಿನ ಬಸಿರು

Author : ಸಿ. ನಾಗಣ್ಣ

Pages 80

₹ 60.00




Year of Publication: 2004
Published by: ಶುಭದ ಪ್ರಕಾಶನ
Address: ಜರಗನಹಳ್ಳಿ ಜಿ.ಪಿ.ನಗರ ಅಂಚೆ, ಬೆಂಗಳೂರು- 560078
Phone: 9448356850

Synopsys

‘ನನ್ನ ಕಣ್ಣಿನ ಬಸಿರು’ ಇಂಡಿಯಾ ಧ್ಯಾನದ ಕವಿತೆಗಳು ಇಂಗ್ಲಿಷ್ ಲೇಖಕಿ ರೊವೀನಾ ಹಿಲ್ ಅವರ ಕವಿತೆಗಳ ಕನ್ನಡಾನುವಾದ. ಕನ್ನಡದ ಹಲವು ಮಹತ್ವದ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದ ರೊವೀನಾ ಹಿಲ್, ಕುಮಾರವ್ಯಾಸ ಭಾರತದ ಸ್ವಲ್ಪ ಭಾಗವನ್ನು ಸೊಗಸಾಗಿ ಅನುವಾದಿಸಿದ್ದಾರೆ. ಅವರು ವೆನಿಜೂಲಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಬೋಧಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ನಾಡಿಗೆ ಅನೇಕ ಸಲ ಬಂದು, ತಂಗಿದ್ದು ಕನ್ನಡದ ಅನೇಕ ಲೇಖಕರ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಸ್ವಯಂ ಕವಿಗಳೂ ಉತ್ತಮ ವಿಮರ್ಶಕರೂ ಆದ ಪ್ರೊ.ಸಿ, ನಾಗಣ್ಣ ಅವರು ರೊವೀನಾ ಹಿಲ್ ಅವರ ಕವನಗಳನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books