ಪ್ರಣಯ ಶತಕ

Author : ಎಚ್. ಎನ್. ಆರತಿ

Pages 112

₹ 120.00




Year of Publication: 2015
Published by: ನಾಕು ತಂತಿ ಪ್ರಕಾಶನ
Address: #1162, 22ನೇ ಮುಖ್ಯ ರಸ್ತೆ, 23ನೇ ಮೈನ್, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು-560070,
Phone: 08026713782

Synopsys

‘ಪ್ರಣಯ ಶತಕ’ ಕೃತಿಯ ಮೂಲ ಲೇಖಕ ಟಿ.ಪಿ ರಾಜೀವನ್. ಆರತಿ ಎಚ್.ಎನ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ‘ಪ್ರಣಯ ಶತಕಂ’ ನಲ್ಲಿ ಹೆಸರೇ ಹೇಳುವಂತೆ ನೂರು ಕವನಗಳಿವೆ. ಇವನ್ನು ಹನಿಗವನಗಳೆಂದು ಕರೆಯಲು ಉದ್ದೇಶಿಸುವುದಿಲ್ಲ. ವಸ್ತುವನ್ನು ಹಿಡಿದಿಡುವ ಸಾಧ್ಯತೆಗನುಗುಣವಾಗಿ ಕೆಲವು ಕವನಗಳು ತುಸು ದೀರ್ಘವೆನಿಸಿವೆ. ಇನ್ನು ಕೆಲವು ಮೂರು ಅಥವಾ ನಾಲ್ಕು ಪುಟ್ಟ ಪುಟ್ಟ ಮಡಿಕೆಗಳನ್ನು ಹೊಂದಿದ್ದು ಬಿಡಿಸಿಟ್ಟಾಗ ಒಂದೇ ಸಾಲು ಅಥವಾ ಒಂದೇ ವಾಕ್ಯವಾಗುತ್ತದೆ. ಇಲ್ಲಿನ ಒಂದುನೂರು ಪುಟಗಳೆಂದರೆ ನಾಲ್ಕುನೂರು ಪುಟಗಳು! ಇಲ್ಲಿನ ನಾಲ್ಕುನೂರು ಬಿಡಿಗಳೆಂದರೆ ನಾಲ್ಕು ಇಡಿಗಳು! ನಾಲ್ಕು ಇಡಿಗಳೆಂದರೆ ಒಂದು ಪುಸ್ತಕ ಎಂಬುದಿದೆ ಎಂದು ವಿಶ್ಲೇಷಿತವಾಗಿದೆ.

About the Author

ಎಚ್. ಎನ್. ಆರತಿ
(13 November 1966)

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ. ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ...

READ MORE

Related Books