ಅಗ್ನಿ ಕಿರೀಟ

Author : ಸ. ರಘುನಾಥ

Pages 68

₹ 30.00




Year of Publication: 2005
Published by: ಮಾತಂಗ ಪ್ರಕಾಶನ
Address: ಮಹರ್ಷಿ ಮಾತಂಗ ಎಜುಕೇಷನ್ ಟ್ರಸ್ಟ್ (ರಿ.) ನಂ. 24, 2ನೇ ಹಂತ, 1ನೇ ತಿರುವು, ಗಾಯಿತ್ರಿ ಪುರಂ, ಉದಯಗಿರಿ ಬಡಾವಣೆ, ಮೈಸೂರು - 19

Synopsys

’ಅಗ್ನಿ ಕಿರೀಟ’ದ ಮೂಲಕ ತೆಲುಗು ಕವಿ ವಿದ್ಯಾಸಾಗರ್ ಅವರ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಸ. ರಘುನಾಥ ಯಶಸ್ವಿಯಾಗಿದ್ದಾರೆ. ವಿದ್ಯಾಸಾಗರ್ ಆಂಧ್ರದ ಹಿರಿಯ ಐಎಎಸ್ ಅಧಿಕಾರಿ. ಆಧುನಿಕ ನಾಗರಿಕತೆ ಹಾಗೂ ಅಭಿವೃದ್ದಿಯ ಪಾತಕಗಳಲ್ಲಿ ಸಿಲುಕಿ ನರಳುತ್ತಿರುವ ನೆಲದಮ್ಮನ ಮೂಲ ಕಂದಮ್ಮಗಳ ಸಂಕಟದ ಬಗ್ಗೆ ಮಾನವೀಯ ಕಾಳಜಿಯನ್ನು ಅಗ್ನಿಕಿರೀಟದಲ್ಲಿ ತೆರೆದು ತೋರಿದ್ದಾರೆ.

“ಈಗಲೂ ಈ ಕಾಡು ನನ್ನದೆಂದೇ ಹೇಳುತ್ತೇನೆ ಹಕ್ಕಿಗಳನ್ನು ಹೊಡೆಯುತ್ತೇನೆ ವಾಲ್ಮೀಕಿಯಾಗುತ್ತೇನೆ. ನನ್ನ ಬದುಕು ಅಪರಾಧಮಯ ಎಂದು ಹೇಳುವ ನಿಮಗೆ ತಗ್ಗಿ ಬಗ್ಗಿ ಇರುವುದೇ ಅಪರಾಧವೆಂದು ಪಾಠ ಹೇಳುತ್ತೇನೆ” ಎಂದು ವಿದ್ಯಸಾಗರ್‌ ನಾಗರಿಕರೂಪದ ನೈಜ ಅಪರಾಧಿಗಳನ್ನು ಬೆತ್ತಲೆ ಮಾಡುತ್ತಾರೆ. ವಿಶ್ವಪ್ರಜ್ಞೆ ಮತ್ತು ನಿಸರ್ಗಪ್ರಜ್ಞೆಗಳೊಂದಿಗೆ ಮಾನವಪ್ರಜ್ಞೆಯನ್ನು ಸಮೀಕರಿಸುತ್ತಾರೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books