ಒಂದಿಷ್ಟು ಭಾರತೀಯ ಕವಿತೆಗಳು

Author : ಡಿ.ಎನ್‌. ಶ್ರೀನಾಥ್‌

Pages 240

₹ 250.00




Year of Publication: 2013
Published by: ಕಾವ್ಯಕಲಾ ಪ್ರಕಾಶನ
Address: ಚಂದ್ರಾ ಲೇಔಟ್ ಶಾಖೆ , ವಿಜಯನಗರ , ಬೆಂಗಳೂರು

Synopsys

ಕವಿ-ಲೇಖಕ ಡಿ.ಎನ್. ಶ್ರೀನಾಥ ಅವರು ಸಂಪಾದಿಸಿದ ಹಾಗೂ ಅನುವಾದಿತ ಕೆಲ ಕವಿತೆಗಳ ಸಂಕಲನ-ಒಂದಿಷ್ಟು ಭಾರತೀಯ ಕವಿತೆಗಳು. ಭಾರತೀಯ ಭಾಷೆಗಳಲ್ಲಿ ತಮಗೆ ಉತ್ತಮವಾದದ್ದು ಎನಿಸಿದ ಕವಿತೆಳನ್ನು ಆಯ್ದು ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಸಂಪಾದಿಸಿದ ಕವಿತೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಅನುವಾದ ಅಧ್ಯಯನದ ದೃಷ್ಟಿಯಿಂದ ಹಾಗೂ ಉತ್ತಮ ಕವಿತೆಗಳ ಗುಣಧರ್ಮ ಕಂಡುಕೊಳ್ಳುವ ದೃಷ್ಟಿಯಿಂದ ಈ ಕೃತಿಯು ಅಧ್ಯಯನ ಯೋಗ್ಯವಾಗಿದೆ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books