ಸಾವಿತ್ರಿ

Author : ಮಂದರ್ಕೆ ಮಾಧವ ಪೈ

Pages 752

₹ 400.00




Published by: ಶ್ರೀ ಅರವಿಂದೋ ರಾಜ್ಯ ಸೊಸೈಟಿ
Address: ಬೆಂಗಳೂರು

Synopsys

ಆಧುನಿಕ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ 'ಸಾವಿತ್ರಿ’ ಅಸೀಮವಾದ ಮಹಾಕಾವ್ಯ ರಚನೆ ಎಂದು ಹೆಸರು ಗಳಿಸಿದೆ. ಇಲ್ಲಿ ಲೇಖಕರು ಅನುವಾದಕ್ಕೆ ಬಳಸಿರುವ ಕಾವ್ಯಭಾಷೆ ಹಳಗನ್ನಡ, ನಡುಗನ್ನಡ ಎರಡರ ಸಮ್ಮಿಶ್ರವಾಗಿದೆ. ಅನುವಾದದಲ್ಲಿ ಧೀರ ಗಂಭೀರವಾದ ವಾಣಿಯಿಂದ ಅಲಂಕೃತವಾಗಿದೆ. ಕಾವ್ಯತತ್ತ್ವ ಮತ್ತು ದರ್ಶನತತ್ತ್ವಗಳು ಒಂದರೊಡನೊಂದು ಕೈಹಿಡಿದು ಇಲ್ಲಿ ನಡೆದಿವೆ. ಮೂಲ ಇಂಗ್ಲಿಷ್ ಮಹಾಕಾವ್ಯದಲ್ಲಿ ಬರುವ ರೂಪಕ, ಪ್ರತಿಮೆ, ಸಂಕೇತಗಳು ಕನ್ನಡದಲ್ಲಿ ಸಮರ್ಥವಾಗಿ ಇಳಿದು ಬಂದಿವೆ. ಅಸಾಧಾರಣವಾದ ವ್ಯುತ್ಪತ್ತಿ, ಮೌಲಿಕ ಕಲ್ಪಕತೆ, ಸಾಂದ್ರವಾದ ವರ್ಣನೆ, ರಮ್ಯನೋಟ ಮತ್ತು ಸಾಧಾರಣವಾದ ದರ್ಶನದೃಷ್ಟಿಯಿಂದ ಶ್ರೀ ಅರವಿಂದರ ಸಾವಿತ್ರಿಯ ಓದು ಅನನ್ಯವಾದ ಅನುಭವವನ್ನು ಸಹೃದಯರಿಗೆ ನೀಡುತ್ತದೆ.

About the Author

ಮಂದರ್ಕೆ ಮಾಧವ ಪೈ
(21 December 1930)

ಮಂದರ್ಕೆ ಮಾಧವ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದವರು (ಜನನ: 21-12-1930) ಕೊಂಕಣಿ-ಕನ್ನಡ ಪದಕೋಶವನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ರಚಿಸಿದ್ದು ಮಾತ್ರವಲ್ಲ; ಶ್ರೀ ಅರವಿಂದರು ಬರೆದ ಸಾವಿತ್ರ ಮಹಾಕಾವ್ಯವವನ್ನು ಸುಮಾರು 40ವರ್ಷಗಳ ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೊಂಕಣಿ-ಕನ್ನಡ ಪದಕೋಶ ರಚನೆಗಾಗಿ ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರ, ವಿಮಲಾ ವಿಶ್ವ ಸೇವಾ ಪುರಸಕಾರ ಲಭಿಸಿವೆ.  ...

READ MORE

Related Books