ರವೀಂದ್ರನಾಥ ಟಾಗೋರರ ಗೀತಾಂಜಲಿ

Author : ಸುಧಾ ಆಡುಕಳ

Pages 158

₹ 150.00




Year of Publication: 2021
Published by: ಲಡಾಯಿ ಪ್ರಕಾಶನ
Address: ಪ್ರಸಾದ್ ಹಾಸ್ಟೆಲ್, ಗದಗ

Synopsys

ಲೇಖಕಿ ಸುಧಾ ಆಡುಕಳ ಅವರ ಅನುವಾದಿತ ಕೃತಿ-ರವೀಂದ್ರನಾಥ ಟಾಗೋರರ ಗೀತಾಂಜಲಿ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕೃತಿ ‘ಗೀತಾಂಜಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಸಂಸ್ಕೃತಿ, ಅಧ್ಯಾತ್ಮಿಕತೆ, ವಿಶ್ವಮಾನವತ್ವ ಇಂತಹ ಮೂಲ ಸ್ವರೂಪ-ಸ್ವಭಾವ ಗುಣದ ಕಾವ್ಯಾಂಶ ಇರುವ ಮೂಲಕ ಗೀತಾಂಜಲಿಯ ಕವಿತೆಗಳನ್ನು ಕನ್ನಡಕ್ಕೆ ಬೇರೆ ಲೇಖಕರು ಅನುವಾದಿದ್ದಾರೆ. ಈ ಕೃತಿಯು ಸಹ ಅದೇ ಮೂಲ ಕೃತಿಯ ಅನುವಾದವಾಗಿದ್ದು, ಈ ಅನುವಾದದಲ್ಲಿ ಮೂಲ ಕವಿತೆಗಳಲ್ಲಿ ಕಂಡ ಲೇಖಕಿಯ ಒಳನೋಟಗಳನ್ನು ಕಾಣಬಹುದು.

 

About the Author

ಸುಧಾ ಆಡುಕಳ
(14 January 1974)

ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ...

READ MORE

Related Books