ಕವಿತೆಯೆಂಬುದು ಪ್ರೀತಿಯ ಕೂಸು

Author : ಕುಮಾರ ಎಸ್.

Pages 84

₹ 75.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

’ಕವಿತೆಯೆಂಬುದು ಪ್ರೀತಿಯ ಕೂಸು’ ಹೆಸರಿನಲ್ಲಿ ರಷ್ಯಾದ ಪ್ರಮುಖ ಕವಯತ್ರಿ ಮರೀನಾ ಸ್ವೆತಯೇವಾ ಅವರ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಪತ್ರಕರ್ತ ಎಸ್. ಕುಮಾರ್‌.

ಮರೀನಾ ಅವಳದು ಕಡು ವ್ಯಾಮೋಹದ ಕಾವ್ಯ. ಆಕೆ ಮಾಸ್ಕೋ ಕ್ರಾಂತಿಯ ಅವಧಿಯಲ್ಲಿ ಬದುಕಿದ್ದವಳು. ಒಂಟಿತನ ಬೆನ್ನಿಗಿತ್ತು. ಜೊತೆಗೆ ಕಾವ್ಯದ ಸಂಗವೂ ಇತ್ತು. ’ನಾನು ಕವಿತೆಗಳನ್ನು ಬರೆಯಲಾಗದ ದಿನ ಹೇಗಿರುತ್ತೇನೆ ಎಂಬುದು ಬಲ್ಲೆ ಆ ದಿನ ನಾನು ಬದುಕಿರುವುದಿಲ್ಲ ಸಾಯುತ್ತೇನೆ' ಎನ್ನುತ್ತಾಳೆ ಅವಳು.

ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಅವರು ಇಲ್ಲಿನ ಕವಿತೆಗಳ ಕುರಿತು ಆಡಿರುವ ಮಾತುಗಳು ಹೀಗಿವೆ: 'ಈ ಕವಿತೆಗಳಲ್ಲಿ ಇರುವುದು ಅರ್ಥದ ಭಾಷೆಯಲ್ಲ, ಭಾವನೆ, ವಿಚಾರಗಳ ಭಾಷೆ. ಹಸಿದು ಸತ್ತ ಮಗಳು, ಕಣ್ಮರೆಯಾದ ಗಂಡ, ಆಮೇಲೂ ಬದುಕಿನಲ್ಲಿ ಎಷ್ಟೊಂದು ವ್ಯಥೆಗಳು, ಆತ್ಮಹತ್ಯೆಗೆ ಶರಣಾದ ಈ ಜೀವ, ಬದುಕಿರುವ ತನಕ ಕಾವ್ಯವನ್ನೇ ಉಸಿರಾಡಿತು ಎಂದು ಹೇಳುತ್ತಾರೆ. ಒಂದು ದಿನ, ಬೇಸಗೆಯ ಒಣ ಉಸಿರಿನಲಿ ಫಸಲಿನಂಚಿನಲ್ಲಿ ಅನ್ಯಮನಸ್ಕನಾಗಿ, ಸಾವು ಹೂ ಕೀಳವುದು ಅದು ನಾನೇ!' ಎನ್ನುವ ಕವಿತೆಯ ಸಾಲುಗಳು ಓದುಗರನ್ನು ಹಿಡಿದಿಟ್ಟುಕೊಂಡಿದೆ. 

About the Author

ಕುಮಾರ ಎಸ್.

ಲೇಖಕ ಕುಮಾರ್ ಎಸ್. ಮೂಲತಃ ಚಿತ್ರದುರ್ಗದವರು. ನಾಡಿನ ಪ್ರಮುಖ ದಿನಪತ್ರಿಕೆಗಳಾದ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವ ಅವರು ರಷ್ಯಾದ ಪ್ರಮುಖ ಕವಯತ್ರಿ ಮರೀನಾ ಸ್ವೆತಯೇವಾ ಅವರ ಕವಿತೆಗಳನ್ನು ಕನ್ನಡೀಕರಿಸಿದ್ದು ‘ಕವಿತೆಯೆಂಬುದು ಪ್ರೀತಿಯ ಕೂಸು’ ಎಂಬ ಹೆಸರಿನಡಿ ಕೃತಿ ಪ್ರಕಟಿಸಿದ್ದಾರೆ.  ...

READ MORE

Related Books