ಪ್ರೇಮಿಗಳ ಪಂಚಾಂಗ ಮೇಘದೂತ

Author : ವಿಷ್ಣು ಜೋಷಿ

Pages 240

₹ 225.00




Year of Publication: 2018
Published by: ಸಾಹಿತ್ಯ ಪ್ರಕಾಶನ
Address: ಕೊಪ್ಪಿಕರ್‌ ಬೀದಿ, ಹುಬ್ಬಳ್ಳಿ

Synopsys

ವಿರಹಿಗಳ ಹೃದಯ ವೀಣೆಯನ್ನು ಅನಾದಿಕಾಲದಿಂದಲೂ ಮೀಟಿ, ನೋವಿನಲ್ಲಿಯೂ ನಲಿವಿನ ಝೇಂಕಾರವನ್ನು ಹೊರ ಹೊಮ್ಮಿಸಿದ ಸಂದೇಶವಾಗಿದೆ 'ಮೇಘದೂತ'. ಈ ಶೃಂಗಾರ ಕಾವ್ಯವನ್ನು ಶ್ಲೋಕ, ಪದ್ಯಾನುವಾದ ಹಾಗೂ ಮನೋಹರವಾದ ವ್ಯಾಖ್ಯಾನಗಳ ಮೂಲಕ ವಿಷ್ಣು ಜೋಶಿ  ಕಟ್ಟಿಕೊಟ್ಟಿದ್ದಾರೆ.

ವಿರಹದಲ್ಲಿ ಪರಸ್ಪರ ಒಲವು ಬಲವಾಗಿ ನಿಂತರೆ, ಬತ್ತದೇ ಇದ್ದರೆ, ಎಣ್ಣೆ ತೀರಿದ ದೀಪದಂತೆ ಆರದೇ ಇದ್ದರೆ, ಮಧುರ, ಮೃದುಲ ಶಂಗಾರ ಭಾವನೆ ಅದೆಷ್ಟು ಅಪ್ಯಾಯಮಾನ ಎನ್ನುವುದರ ಕುರಿತು ಇಲ್ಲಿ ವಿವರಿಸಿದ್ದಾರೆ. ಕಾಳಿದಾಸ ಮೇಘದೂತ ಕಾವ್ಯದ 111 ಶ್ಲೋಕಗಳನ್ನು ವಿಷ್ಣು ಜೋಶಿ ಕನ್ನಡಕ್ಕೆ ಅನುವಾದಿಸಿ ಇಲ್ಲಿ ಕೊಟ್ಟಿದ್ದಾರೆ.

About the Author

ವಿಷ್ಣು ಜೋಷಿ

ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ  ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು.  ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...

READ MORE

Related Books