ಗ್ರೀಕ್ ಹೊಸ ಕಾವ್ಯ

Author : ವಿಜಯಾ ಗುತ್ತಲ

Pages 145

₹ 140.00




Year of Publication: 2018
Published by: ಪಲ್ಲವ ಪ್ರಕಾಶನ
Address: # ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113.
Phone: 9840354507

Synopsys

ಲೇಖಕರಾದ ವಿಜಯಾ ಗುತ್ತಲ ಹಾಗೂ ವಿಕ್ರಮ ವಿಸಾಜಿ ಅವರು ಜಂಟಿಯಾಗಿ ಆಧುನಿಕ ಗ್ರೀಕ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ಗ್ರೀಕ್ ಹೊಸ ಕಾವ್ಯ. ರೋಮನ್ ಹಾಗೂ ಗ್ರೀಕ್ ಸಂಸ್ಕೃತಿಗಳು ಅತ್ಯಂತ ಪ್ರಾಚೀನವಾದವುಗಳು. ಗ್ರೀಕ್ ಕವಿಗಳು ಪುರಾಣಗಳ ಕಥೆಗಳನ್ನು ಕಾವ್ಯಗಳಲ್ಲಿ ಬಳಸುವುದು ಹೆಚ್ಚು. ಈ ಪುರಾಣಗಳು ಅಲ್ಲಿಯ ಸಂಸ್ಕೃತಿಯ ಬೇರು ಎನ್ನುವಷ್ಟು ಅಲ್ಲಿಯ ಜನಜೀವನದ ಮೇಲೆ ಪ್ರಭಾವ ಬೀರಿವೆ. ವಿಶ್ವದ ಇತರೆ ದೇಶದ ಕವಿಗಳಿಗಿಂತ ಗ್ರೀಕ್ ಕವಿಗಳು ಪುರಾಣದ ವಸ್ತುವನ್ನು ವಿಭಿನ್ನವಾಗೇ ಬಳಸುವುದು ವಿಶೇಷ. ಅದನ್ನು ಇಲ್ಲಿಯ ಅನುವಾದಿತ ಕವಿತೆಗಳಲ್ಲಿ ಕಾಣಬಹುದು.

About the Author

ವಿಜಯಾ ಗುತ್ತಲ
(27 June 1952)

ಲೇಖಕಿ, ಅನುವಾದಕಿ ವಿಜಯಾ ಗುತ್ತಲ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ (ಜನನ: 27-06-1952) ಹಂಸಭಾವಿಯಲ್ಲಿ ಜನಿಸಿದರು. ತಂದೆ ಸಿ. ಗುತ್ತಲ, ತಾಯಿ ದಾಕ್ಷಾಯಿಣಿ ಗುತ್ತಲ.  `ತೇಜಸ್ವಿ, ಸಾರಾ ಅಬೂಬಕರ್, ಗೀತಾ ನಾಗಭೂಷಣ ಮತ್ತು ವಚನಗಳು (ಇಂಗ್ಲಿಷಿಗೆ ಅನುವಾದ), ಹುಚ್ಚು ದಾಳಿಂಬೆ ಗಿಡ (ಆಧುನಿಕ ಗ್ರೀಕ್ ಕವಿತೆಗಳು) ಒಡೆಸಿಯಸ್, ಎಲೇಲೆಸ್ ಕವಿತೆಗಳು, ವಸಂತ ನನ್ನೊಳಗಿದೆ (ಕವಾಫಿ ಕವನಗಳು), ಒರಸ್ತಿಯ (ಇನ್ನಿಲಸ್ ನಾಟಕ ತ್ರಿವಳಿ)ಗಳನ್ನುಅವರ ಕೃತಿಗಳು. ಇಂಗ್ಲಿಷಿನಲ್ಲಿ ‘ Vachanas of Sharanas, The Sign, Vachanas’ ರಚಿಸಿದ್ದಾರೆ. ಅವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ಗಳು ಲಭಿಸಿದೆ. ...

READ MORE

Related Books