ಕನ್ನಡಕ್ಕೆ ಬಂದ ಕವಿತೆ

Author : ಓ. ಎಲ್. ನಾಗಭೂಷಣಸ್ವಾಮಿ

Pages 166

₹ 160.00




Year of Publication: 2020
Published by: ಸಂಗಾತ ಪುಸ್ತಕ
Address: ಅಂಚೆ-ರಾಜೂರ-582114, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ
Phone: 9341757653

Synopsys

19 ದೇಶಗಳ, 31 ಕವಿಗಳ, 80 ಕವಿತೆಗಳ ಕನ್ನಡಾನುವಾದ ಸಂಕಲನ ‘ಕನ್ನಡಕ್ಕೆ ಬಂದ ಕವಿತೆ’. ಓ.ಎಲ್. ನಾಗಭೂಷಣಸ್ವಾಮಿ ಈ ಕೃತಿಯನ್ನು ರಚಿಸಿದ್ದಾರೆ. ಈ ಅನುವಾದಗಳು ಮೈದಾಳಿರುವ ಕನ್ನಡಕ್ಕೆ ಒಂದು ವೈಶಿಷ್ಟ್ಯವಿದೆ. ಈ ಕವಿತೆಗಳು ಶರಧಿಯಂತೆ ಭೋರ್ಗರೆಯುವುದಿಲ್ಲ. ಜಲಪಾತದಂತೆ ಧುಮ್ಮಿಕ್ಕುವುದಿಲ್ಲ. ಸಮನೆಲದ ಮೇಲೆ ಸರಾಗವಾಗಿ ಇಂಪಾದ ಕಲರವದೊಡನೆ ಹರಿಯುವ ನದಿಯ ಸಿಂಗಾರಕ್ಕೆ ಹತ್ತಿರವಾದ ಗದ್ಯಗಂಧಿಯಾದ ಕಾವ್ಯ ಭಾಷೆಯೊಂದನ್ನು ಓ.ಎಲ್.ಎನ್ ಅವರು ಮೂಲಕೃತಿಗಳ ಮುಖಾಮುಖಿಯೊಂದಿಗೆ ರೂಪಿಸಿಕೊಂಡಿದ್ದಾರೆ.

ಭಾಷೆಯನ್ನು ವಿರೂಪಗೊಳಿಸುವುದೊಂದೇ ಸೃಜನಶೀಲತೆಯ ಏಕಮಾತ್ರ ಮಾರ್ಗವೆಂಬ ಅತಿರೇಕದ ಆಡಂಬರಗಳಿಗೆ ಓ.ಎಲ್. ನಾಗಭಾಷಣ್ ಅವರ ಅನುವಾದದ ಭಾಷೆ ಅಪವಾದವಾಗಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್. ಸರಳತೆಯೊಳಗೆ ಸಂಕೀರ್ಣತೆಯನ್ನು ಸಾಕಾರಗೊಳಿಸುವ ಒಂದು ಸ್ತುತ್ಯ ಪ್ರಯತ್ನವೇ ಈ ಕೃತಿ. ಸಾಹಿತ್ಯಕ ಭಾಷೆಯ ಬಿಗುವಿನ ಸೋಗನ್ನು ಹಾಕದೆ ಸಹಜ ಕನ್ನಡ ಪದ ಮತ್ತು ನುಡಿಗಟ್ಟುಗಳೊಳಗೇ ಆಧುನಿಕ ಕಾವ್ಯದ ಅಗ್ಗಳ ಕೃತಿಗಳನ್ನು ಪಡಿಮೂಡಿಸಬಹುದೆಂದು ಈ ಅನುವಾದಗಳು ಸಾಬೀತು ಮಾಡುತ್ತವೆ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books