ಎಲ್ಲ ಎಲ್ಲೆ ಮೀರಿ

Author : ವಿಜಯಾ ಗುತ್ತಲ

Pages 90

₹ 100.00




Year of Publication: 2021
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

ಕಾಶ್ಮೀರಿ ಸಾಹಿತ್ಯದ ಮೊದಲ ಕವಿ ಎಂದೇ ಖ್ಯಾತಿಯ ಲಾಲ್ ದೇಡ ಅವರ ಕವಿತೆಗಳನ್ನು ಲೇಖಕಿ ವಿಜಯಾ ಗುತ್ತಲ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಎಲ್ಲ ಎಲ್ಲೆ ಮೀರಿ. ಲಾಲ್ ದೇಡ, ಅಕ್ಕ ಮಹಾದೇವಿಯ ಜೀವನ ಚರಿತ್ರೆಯನ್ನು ಹೋಲುತ್ತದೆ. ಅವಳು ಕಾಶ್ಮೀರ ಶೈವ ಅಥವಾ ‘ತ್ರಿಕ’ ಸಂತಳು. ಅವಳ ವಾಕ್ಕುಗಳು ಕಾಶ್ಮೀರಿ, ಸೂಫಿ, ಇಸ್ಲಾಂ, ಸಿಖ್ ಸಂಪ್ರದಾಯದ ಅಂಶಗಳನ್ನು ಒಳಗೊಂಡಿವೆ. ವಿಮರ್ಶಕ ಡಾ. ಓ.ಎಲ್. ನಾಗಭೂಷಣ ಅವರು ಕೃತಿಗೆ ಮುನ್ನುಡಿ ಬರೆದು ‘ಸುಮಾರು 7 ಶತಮಾನ ಕಾಲ ಕಾಶ್ಮೀರಿ ಜನತೆಯ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದವಳನ್ನು ಅರಬ್-ಇಸ್ಲಾಂ ಧರ್ಮದ ಸನ್ಯಾಸಿ, ಹಿಂದೂ ಧರ್ಮದ ಯೋಗಿ ಎಂದು ಪರಸ್ಪರ ವಿರುದ್ಧವೋ ಎಂಬಂತೆ ಸೀಳಿ ನೋಡುವ ಹವ್ಯಾಸ ಬೆಳೆದಿರುವುದು ಶೋಚನೀಯ’ ಎಂದು ವಿಷಾದಿಸಿದ್ದಾರೆ.

About the Author

ವಿಜಯಾ ಗುತ್ತಲ
(27 June 1952)

ಲೇಖಕಿ, ಅನುವಾದಕಿ ವಿಜಯಾ ಗುತ್ತಲ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ (ಜನನ: 27-06-1952) ಹಂಸಭಾವಿಯಲ್ಲಿ ಜನಿಸಿದರು. ತಂದೆ ಸಿ. ಗುತ್ತಲ, ತಾಯಿ ದಾಕ್ಷಾಯಿಣಿ ಗುತ್ತಲ.  `ತೇಜಸ್ವಿ, ಸಾರಾ ಅಬೂಬಕರ್, ಗೀತಾ ನಾಗಭೂಷಣ ಮತ್ತು ವಚನಗಳು (ಇಂಗ್ಲಿಷಿಗೆ ಅನುವಾದ), ಹುಚ್ಚು ದಾಳಿಂಬೆ ಗಿಡ (ಆಧುನಿಕ ಗ್ರೀಕ್ ಕವಿತೆಗಳು) ಒಡೆಸಿಯಸ್, ಎಲೇಲೆಸ್ ಕವಿತೆಗಳು, ವಸಂತ ನನ್ನೊಳಗಿದೆ (ಕವಾಫಿ ಕವನಗಳು), ಒರಸ್ತಿಯ (ಇನ್ನಿಲಸ್ ನಾಟಕ ತ್ರಿವಳಿ)ಗಳನ್ನುಅವರ ಕೃತಿಗಳು. ಇಂಗ್ಲಿಷಿನಲ್ಲಿ ‘ Vachanas of Sharanas, The Sign, Vachanas’ ರಚಿಸಿದ್ದಾರೆ. ಅವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ಗಳು ಲಭಿಸಿದೆ. ...

READ MORE

Related Books