ಕ್ಯಾಸ್ಟ್ ಕೆಮಿಸ್ಟ್ರಿ

Author : ಸಿ.ಜಿ. ಲಕ್ಷ್ಮೀಪತಿ

Pages 290

₹ 315.00




Year of Publication: 2022
Published by: ಸಂಚಲನ ಪ್ರಕಾಶನ

Synopsys

ಕ್ಯಾಸ್ಟ್ ಕೆಮಿಸ್ಟ್ರಿ ಲಕ್ಷ್ಮೀಪತಿ ಸಿ.ಜಿ ಅವರ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನವಾಗಿದೆ. ಕ್ಯಾಸ್ಟ್ ಕೆಮಿಸ್ಟ್ರಿ ಕೃತಿ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನ ನಿರತ ವಲಯದೊಳಗೆ ಬರುತ್ತಿರುವ ಹೊಸ ತಲೆಮಾರಿನ ಮುನ್ನಡೆಗೊಂಡು ನಿದಶ‍‍್ನದಂತಿದೆ . ಈ ಬೆಳವಣಿಗೆ ಆಕಸ್ಮಿಕವಾದುದಲ್ಲ ಅಥವಾ ಸಮಾಜಶ್ತಾಸ್ತ್ರದ ಕ್ಷೇತ್ರಕ್ಕೆ ಮಾತ್ರ ಪರಿಮಿತಗೊಂಡಿದ್ದೂ ಅಲ್ಲ. ಬದಲಾಗುತ್ತಿರುವ ಕಾಲಮಾನ ತನ್ನ ಸತ್ವವನ್ನು ಹಲವು ರೂಪದಲ್ಲಿ ವ್ಯಕ್ತಗೊಳಿಸುತ್ತದೆ. ಸಾಹಿತ್ಯ, ವಿಚಾರ, ಬದುಕಿನ ಕ್ರಮ ಹಾಗೂ ಚಿಂತನಾ ವಿಧಾನಗಳು ಈ ಹೊಸತನದ ಆಗಮನವನ್ನು ಹೆಚ್ಚು ನಿರ್ದಿಷ್ಟವಾಗಿ ಸೂಚಿಸಬಲ್ಲ ಕನ್ನಡಗಳಾಗಿರುತ್ತವಷ್ಟೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ವಿವರಿಸಲಾಗಿದೆ.

About the Author

ಸಿ.ಜಿ. ಲಕ್ಷ್ಮೀಪತಿ

ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಮೈಸೂರು ಮುಕ್ತ ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕೃತಿಗಳು: ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ ...

READ MORE

Related Books