ಶಾಸನಶಾಸ್ತ್ರ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 224

₹ 130.00




Year of Publication: 2011
Published by: ಲಕ್ಷ್ಮೀ ಪ್ರಿಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್
Address: #341, ಕಾಳಮ್ಮನ ದೇವಸ್ಥಾನ ಬೀದಿ, ಮೈಸೂರು 570 001

Synopsys

‘ಶಾಸನಶಾಸ್ತ್ರ’ ಕೃತಿಯು ಸಿ.ಪಿ.ಕೆ ಅವರ ಶಾಸನಗಳ ಆಧಾರಿತ ಅಧ್ಯಯನ ಕೃತಿಯಾಗಿದೆ. ಈ ಕೃತಿಯು ಅನೇಕ ಸತ್ಯಗಳನ್ನು ತೆರೆದಿಟ್ಟು ಊಹಾಪೋಹಗಳಿಗೆ ತೆರೆ ಎಳೆದು ಗೊಂದಲ ನಿವಾರಣೆ ಮಾಡುತ್ತದೆ. ಶಾಸನಗಳ ಅಧ್ಯಯನ ಇಂದು ಜನಪ್ರಿಯವಾಗಿದ್ದು ಹಿಂದೆ ಆಳಿದ ರಾಜರುಗಳು, ದಾನಿಗಳು, ವೀರರು-ತೂರರ ಪರಿಚಯವನ್ನು ಅದು ಮಾಡಿಕೊಡುತ್ತದೆ. ಲಿಪಿ ಬರುವ ಮೊದಲೇ ಇದು ರೂಢಿಯಲ್ಲಿತ್ತು ಯಾವುಯಾವುದೋ ಸಂಕೇತಗಳನ್ನು ಬಳಸಿ ನಿರ್ಮಿಸಿದ್ದ ಎಷ್ಟೋ ಶಾಸನಗಳನ್ನು ಇಂದು ಓದಲಾಗದೆ ಪರಿಣತ ಬುದ್ಧಿವಂತರಿಗಾಗಿ ಎದುರುನೋಡುವುದು ಅನಿವಾರ್ಯವಾಗಿದೆ. ಇಂದಿನ ಪ್ರಸ್ತಕಗಳು ನೀಡುವಷ್ಟು ಸಮೃದ್ಧ ಮಾಹಿತಿಯನ್ನೆಂದಿಗೂ ಶಾಸನಗಳು ನೀಡಲಾರವು, ಅವನ್ನು ಓದಿ ತಮ್ಮ ಬುದ್ಧಿಗೆ ನಿಲುಕುವಷ್ಟು ಮಾತ್ರ ಅಂದಾಜಿಸಬಹುದು. ಅದೂ ಒಂದೇ ಶಾಸನವನ್ನು ಹೆಚ್ಚು ಪಂಡಿತರು ಓದಿದಾಗ ಯಾವುದೇ ನಿರ್ಧಾರಕ್ಕೆ ಬರದೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು – ಹೀಗೆ ಶಾಸನಶಾಸ್ತ್ರದ ಬಗ್ಗೆ ವಿವರವಾಗಿ ಇಲ್ಲಿ ಒಂದು ಅಧ್ಯಯನವನ್ನೇ ಮಾಡಲಾಗಿದೆ

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Reviews

 (ಹೊಸತು, ಮೇ 2012, ಪುಸ್ತಕದ ಪರಿಚಯ)

ತಮ್ಮ ಇರುವಿಕೆಯನ್ನು, ಸಾಧನೆಗಳನ್ನು ಮುಂದಿನ ಜನಾಂಗವೂ ತಿಳಿಯಲಿ ಎಂಬ ಕಾರಣದಿಂದ ಶಾಶ್ವತವಾಗಿ ಬಹುಕಾಲ ಬಾಳುವಂಥ ಕಲ್ಲು - ತಾಮ್ರ - ಇತರ ಲೋಹಗಳಲ್ಲಿ ಕೊರೆದು ಇಡುತ್ತಿದ್ದರು. ಇದೇ ಶಾಸನ ದೀರ್ಘಕಾಲ ಬಾಳಿ ಹಿಂದೆ ನಡೆದದ್ದನ್ನು ತಿಳಿಸುವ ಒಂದು ಸಾಧನ. ಇದು ಅನೇಕ ಸತ್ಯಗಳನ್ನು ತೆರೆದಿಟ್ಟು ಊಹಾಪೋಹಗಳಿಗೆ ತೆರೆ ಎಳೆದು ಗೊಂದಲ ನಿವಾರಣೆ ಮಾಡುತ್ತದೆ. ಶಾಸನಗಳ ಅಧ್ಯಯನ ಇಂದು ಜನಪ್ರಿಯವಾಗಿದ್ದು ಹಿಂದೆ ಆಳಿದ ರಾಜರುಗಳು, ದಾನಿಗಳು, ವೀರರು-ತೂರರ ಪರಿಚಯವನ್ನು ಅದು ಮಾಡಿಕೊಡುತ್ತದೆ. ಲಿಪಿ ಬರುವ ಮೊದಲೇ ಇದು ರೂಢಿಯಲ್ಲಿತ್ತು ಯಾವುಯಾವುದೋ ಸಂಕೇತಗಳನ್ನು ಬಳಸಿ ನಿರ್ಮಿಸಿದ್ದ ಎಷ್ಟೋ ಶಾಸನಗಳನ್ನು ಇಂದು ಓದಲಾಗದೆ ಪರಿಣತ ಬುದ್ಧಿವಂತರಿಗಾಗಿ ಎದುರುನೋಡುವುದು ಅನಿವಾರ್ಯವಾಗಿದೆ. ಇಂದಿನ ಪ್ರಸ್ತಕಗಳು ನೀಡುವಷ್ಟು ಸಮೃದ್ಧ ಮಾಹಿತಿಯನ್ನೆಂದಿಗೂ ಶಾಸನಗಳು ನೀಡಲಾರವು, ಅವನ್ನು ಓದಿ ತಮ್ಮ ಬುದ್ಧಿಗೆ ನಿಲುಕುವಷ್ಟು ಮಾತ್ರ ಅಂದಾಜಿಸಬಹುದು. ಅದೂ ಒಂದೇ ಶಾಸನವನ್ನು ಹೆಚ್ಚು ಪಂಡಿತರು ಓದಿದಾಗ ಯಾವುದೇ ನಿರ್ಧಾರಕ್ಕೆ ಬರದೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು – ಹೀಗೆ ಶಾಸನಶಾಸ್ತ್ರದ ಬಗ್ಗೆ ವಿವರವಾಗಿ ಇಲ್ಲಿ ಒಂದು ಅಧ್ಯಯನವನ್ನೇ ಮಾಡಲಾಗಿದೆ ಎಂದರೂ ತಪ್ಪಲ್ಲ ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಇದೊಂದು ಆಕರಗ್ರಂಥವಾಗಿದ್ದು ಕೈಪಿಡಿಯಂತೆ ಮಾರ್ಗದರ್ಶನ ನೀಡಬಲ್ಲದು.

 

 

Related Books