ಪರಿಣಾಮಕಾರಿ ಭಾಷಾ ಬೋಧನೋಪಕರಣಗಳು

Author : ಕೆ. ಸತ್ಯನಾರಾಯಣ ಸಿಂಗ್

Pages 82

₹ 100.00




Published by: ಪ್ರಗತಿಪರ ಶಿಕ್ಷಣ ಪ್ರಕಾಶನ
Address: ಜಯನಗರ, ಬೆಂಗಳೂರು-560011

Synopsys

‘ಪರಿಣಾಮಕಾರಿ ಭಾಷಾ ಬೋಧನೋಪಕರಣಗಳು’ ಕೃತಿಯು ಕೆ. ಸತ್ಯನಾರಾಯಣ ಸಿಂಗ್ ಅವರ ಸಂಶೋಧನಾಧಾರಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಡಾ.ಕೆ. ಸತ್ಯನಾರಾಯಣ ಸಿಂಗರು  ಸಂಶೋಧನೆಯನ್ನು ಪ್ರಕಟಿಸುವ ಕಾರ್ಯವನ್ನು ಕೈಗೆತ್ತಿಕೊಂಡುದು ಸುತ್ತ್ಯಾರ್ಹ ಕಾರ್ಯ.. ಶಿಕ್ಷಣದಲ್ಲಿ ಭಾಷಾ ಪ್ರಭುತ್ವ ಹಾಗೂ ಭಾಷಾ ಶುದ್ಧತೆ ಅತೀವ ಮಹತ್ವದ್ದು. ಪ್ರಾಥಮಿಕ ಹಂತದಲ್ಲಿಯೇ ಶುದ್ಧ ಭಾಷಾ ಬಳಕೆಯನ್ನು ಹಾಗೂ ಗ್ರಹಣ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯಗತ್ಯ. ಸಸಿಯಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಕೇವಲ ಶ್ರವಣ ಒಂದನ್ನೇ ಬಳಸಿ ಕಲಿಯುವುದು ಪರಿಣಾಮಕಾರಿಯಲ್ಲ. ಚಿತ್ರಗಳನ್ನಾಗಲಿ ಪದಪುಂಜಗಳ ಕಾರ್ಡುಗಳನ್ನಾಗಲಿ ಬಳಸುವಾಗ, ಅವುಗಳನ್ನು ಕಣ್ಣಿಂದ ನೋಡಿ, ಕಿವಿಯಿಂದ ಕೇಳಿ ಕೈಯಿಂದ ಸ್ಪರ್ಶಿಸಿ, ಬಾಯಿಯಿಂದ ಉಚ್ಚರಿಸಿ, ಹೀಗೆ ಮೂರು ನಾಲ್ಕು ಜ್ಞಾನೇಂದ್ರಿಯಗಳನ್ನು ಕೂಡಿ ಉಪಯೋಗಿಸಿಕೊಂಡರೆ, ಭಾಷಾ ಕಲಿಕೆ, ತುಂಬಾ ಪರಿಣಾಮಕಾರಿ ಯಾಗುವುದರಲ್ಲಿ ಸಂದೇಹವಿಲ್ಲ. ಕಲಿಸುವ ಶಿಕ್ಷಕರ ಸಹಾಯ ಪಡೆದು, ತಜ್ಞರ ಮಾರ್ಗದರ್ಶನದಲ್ಲಿ ಮಕ್ಕಳೊಂದಿಗೆ ಪ್ರಯೋಗ ನಡೆಸಿ, ಮತ್ತೆ ಮತ್ತೆ ತಿದ್ದಿ ಸಂಶೋಧನೆ ಮಾಡಿದ್ದಾರೆ’ ಎಂದಿದೆ.

About the Author

ಕೆ. ಸತ್ಯನಾರಾಯಣ ಸಿಂಗ್

ಕೆ. ಸತ್ಯನಾರಾಯಣ ಸಿಂಗ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಇಡಿ, ಪದವೀಧರರು. ಸಂಶೋಧನೆ ಅವರ ಆಸಕ್ತಿ ಕ್ಷೇತ್ರ. ಯೂರೋಪಿನ್ ಆಂಗ್ಲಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿಯನ್ನು ನಿರ್ವಹಿಸಿರುವ ಅವರು ತಮ್ಮ ಶಿಕ್ಷಕ ಸೇವೆಯನ್ನು ಗ್ರಾಮಾಂತರ ವಿದ್ಯಾರ್ಥಿಗಳಿಗೂ ನೀಡಿರುತ್ತಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ವಿಸ್ತರಣಾ ವಿಭಾಗದ ಕೊ. ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು : ಭಾಷಾ ಬೋಧನೋಪಕರಣಗಳು (ಸಂಶೋಧನೆ), ಅಣು ಬೋಧನಾತರಬೇತಿ ತಂತ್ರಗಳು, ಶಾಲಾ ಸಂಕೀರ್ಣ.  ...

READ MORE

Related Books