ಶಾಸನ, ಇತಿಹಾಸ ಮಂಥನ

Author : ಪಿ.ವಿ.ಕೃಷ್ಣಮೂರ್ತಿ

Pages 344

₹ 150.00




Year of Publication: 2011
Published by: ತುಮಕೂರು ವಿಶ್ವವಿದ್ಯಾನಿಲಯ
Address: ತುಮಕೂರು - 572 103

Synopsys

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ 37 ಸಂಶೋಧನ ಲೇಖನಗಳ ಸಂಕಲನ -` ಶಾಸನ, ಇತಿಹಾಸ ಮಂಥನ'. ಈ ಕೃತಿಯಲ್ಲಿ ಪ್ರಧಾನವಾಗಿ ಪ್ರಾದೇಶಿಕ ಇತಿಹಾಸಕ್ಕೆ ಸಂಬಂಧಿಸದಂತೆ ಮುಖ್ಯವಾಗಿ ಶಾಸನಗಳನ್ನೇ ಪ್ರಧಾನ ಆಕರಗಳನ್ನಾಗಿ ಪರಿಗಣಿಸಿ ರೂಪುಗೊಂಡ ಬರಹಗಳಾಗಿವೆ. ಕದಂಬರು: ಇಂದಿನ ಕರ್ನಾಟಕದ ಆಚಿನ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವ, ಹೊಯ್ಸಳ ಮಹಾಮಂಡಳೇಶ್ವರ ಪೂರ್ವಾದಿರಾಯರು, ಮುಮ್ಮಡಿ ವೀರಬಲ್ಲಾಳನ ಕಾಲದ ಹೆಸರ್ ಕುಂದಾಣಿ ರಾಜ್ಯದ ನಾಡುಗಳು, ಮಹಾಬಲಿ ಬಾಣರಸರನ್ನು ಕುರಿತ ಬರಹಗಳು, ಶ್ರೀಕೃಷ್ಣದೇವರಾಯನ ಕಾಲದ ಆಡಳಿತ ಘಟಕಗಳು, ಕರ್ನಾಟಕದ ಕೈಫಿಯತ್ತುಗಳಲ್ಲಿ ಶ್ರೀಕೃಷ್ಣದೇವರಾಯ , ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಬೆಂಗಳೂರು ಕೆಂಪೇಗೌಡರು ಮತ್ತು ಸುಗುಟೂರು ಪಾಳೆಯಗಾರರಾದ ತಮ್ಮೇಗೌಡರ ವಂಶೀಯರ ಕುರಿತು ಹಲವಾರು ಲೇಖನಗಳು ಇಲ್ಲಿವೆ.

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books