ವಾಙ್ಮಯ ಆರಾಧಕ ಕಡೆಂಗೋಡ್ಲು

Author : ಸುನೀತಿ ಉದ್ಯಾವರ

Pages 402

₹ 200.00




Year of Publication: 2003
Published by: ಕನ್ನಡ ವಿಭಾಗ
Address: ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನನಗರಿ, ಸಾಂತಾಕ್ರೂಜ್‌

Synopsys

‘ವಾಙ್ಮಯ ಆರಾಧಕ ಕಡೆಂಗೋಡ್ಲು’ ಸುನೀತಿ ಉದ್ಯಾವರ ಅವರ ಅಧ್ಯಯನ ಗ್ರಂಥವಾಗಿದೆ, ಶಂಕರ ಭಟ್ಟರ ಜೀವನ-ಕೃತಿಗಳನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಯ್ದುಕೊಂಡು ವಿಶೇಷ ಪರಿಶ್ರಮದಿಂದ ಅದನ್ನು ಪೂರ್ಣಗೊಳಿಸಿದ್ದಾರೆ. ಶಂಕರ ಭಟ್ಟರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿದೆ.

About the Author

ಸುನೀತಿ ಉದ್ಯಾವರ
(11 July 1937)

ಕಾದಂಬರಿಗಾರ್ತಿ, ಕವಯಿತ್ರಿ ಸುನೀತಿ ಉದ್ಯಾವರ ಪಿಎಚ್.ಡಿ. ನಿವೃತ್ತ ಅಧ್ಯಾಪಕರು. ಅವರು 1937 ಜುಲೈ 11 ಮಂಗಳೂರಿನಲ್ಲಿ ಜನಿಸಿದರು. ತಂದೆ ಶಾಂತಾರಾಮರಾವ್, ತಾಯಿ ಸೀತಾಬಾಯಿ. ಹುಟ್ಟೂರಿನಲ್ಲೇ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ ಅವರು ನಂತರ ಮುಂಬಯಿಯ ಖಾಲ್ಸಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.  ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿದರು. ನಂತರ ಮುಂಬಯಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ-ವಡಾಲಾದಲ್ಲಿ ಶಿಕ್ಷಕಿಯಾಗಿ 34ವರ್ಷಗಳ ಕಾರ್ಯ ನಿರ್ವಹಿಸಿದ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ “ಕಡೆಂಗೋಡ್ಲು ಶಂಕರಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಾತ್ರವಲ್ಲ ಅದೇ ವಿಶ್ವವಿದ್ಯಾಲಯದಲ್ಲಿ ಸುವರ್ಣ ಪದಕದೊಂದಿಗೆ ಕನ್ನಡ ಎಂ.ಎ. ಗಳಿಸಿದ ಹಾಗೂ ಡಾಕ್ಟರೇಟ್ ಪಡೆದ ...

READ MORE

Reviews

ಹೊಸತು-2004- ಜೂನ್‌

ಮುಂಬಯಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ  ಸುನೀತಿ ಉದ್ಯಾವರ ಅವರದ್ದು ಕಡೆಂಗೋಡ್ಲು ಶಂಕರ ಭಟ್ಟರ ಜೀವನ-ಕೃತಿಗಳನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಯ್ದುಕೊಂಡು ವಿಶೇಷ ಪರಿಶ್ರಮದಿಂದ ಅದನ್ನು ಪೂರ್ಣಗೊಳಿಸಿದ್ದಾರೆ. ಶಂಕರ ಭಟ್ಟರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿರುವ ಈ ಕೃತಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತು ಕಡೆಂಗೋಡ್ಲು ಅವರ ಬಗ್ಗೆ ಹೆಚ್ಚಿಗೆ ತಿಳಿಯ ಬಯಸುವವರಿಗೆ ಕೈದೀವಿಗೆಯಂತಿದೆ. ವ್ಯಕ್ತಿಚಿತ್ರ-ಸಾಹಿತ್ಯ ಚಿತ್ರಣ ಎರಡೂ ಇಲ್ಲಿವೆ.

Related Books